ADVERTISEMENT

ಬಾಲ್ಯದ ಸುಂದರ ನೆನಪುಗಳನ್ನು ಹಂಚಿಕೊಂಡ ನವರಸ ನಾಯಕ ಜಗ್ಗೇಶ್

ಪ್ರಜಾವಾಣಿ ವೆಬ್‌ ಡೆಸ್ಕ್‌
Published 20 ಅಕ್ಟೋಬರ್ 2025, 12:34 IST
Last Updated 20 ಅಕ್ಟೋಬರ್ 2025, 12:34 IST

ಚಿತ್ರ ಕೃಪೆ: actor_jaggesh

ಚಿತ್ರ ಕೃಪೆ: actor_jaggesh

ಸ್ಯಾಂಡಲ್‌ವುಡ್‌ನ ನವರಸ ನಾಯಕ ಜಗ್ಗೇಶ್ ಅವರು ತಮ್ಮ ಹಳೆಯ ಮನೆಯಲ್ಲಿ ಕಳೆದ ಬಾಲ್ಯದ ಸುಂದರ ನೆನಪುಗಳನ್ನು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

‘ಇದೆ ಜಗಲಿಯಲ್ಲಿ ನನ್ನ ಆಟದ ಮೈದಾನ, ರಾಗಿ ರೊಟ್ಟಿ ಉಚ್ಚೆಳ್ಳು ಚಟ್ನಿ ಬೆಣ್ಣೆ ತಿಂದು ಜಟ್ಟಿಯಂತೆ ಬೆಳೆದದ್ದು. ಈ ಸ್ಥಳದ ಮುಂದೆ ಅಜ್ಜಿ ಸೀಗೆಕಾಯಿ ಅರೆದು ಸ್ನಾನ ಮಾಡಿಸಿದ್ದು. ಇದೆ ಜಗಲಿಯ ಮುಂದೆ ಚಾಪೆ ಮೇಲೆ ಮಲಗಿ ಚಂದಿರ ನಕ್ಷತ್ರ ನೋಡುತ್ತ ದೃವನಕ್ಷತ್ರದಂತೆ ಅಜರಾಮರ ಬೆಳೆಯಬೇಕು ಕಂದ ಎಂದು ತಾತ ಕಥೆ ಹೇಳಿ ಹರಸಿದ್ದರು’ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

‘ಈ ಸ್ಥಳದಲ್ಲಿ ಅಪ್ಪನ ತಮ್ಮ ತಂಗಿಯರ ಮದುವೆ ಕಂಡಿದ್ದು, ಇದೆ ರಸ್ತೆಯ ಹನುಮಂತನ ಮುಂದೆ ಊರು ಮಂದಿಯ ನಾಟಕ ನೋಡಿದ್ದು. ಇದೆ ಪರಿಸರದ ಹುಡುಗ ನವರಸನಾಯಕ ಆಗಿದ್ದು’ ಎಂದು ಭಾವುಕರಾಗಿದ್ದಾರೆ.

‘ಕೆಲವೊಮ್ಮ ಸಾಮಾಜಿಕ ಜಾಲತಾಣದಲ್ಲಿ "ಬಡವರ ಮಕ್ಕಳು ಬೆಳಿಬೇಕು" ಅವಕಾಶ ಸಿಗುತ್ತಿಲ್ಲಾ ಎಂಬ ಕೂಗು ನೋಡಿ ದುಃಖವಾಗುತ್ತೆ. ಕೆಲವರು ‘ನೀವೇನು ಬಿಡಿ ಸಾರ್ ನಿಮ್ಮತ್ರ ದುಡ್ಡು ಇದೆ, ಸಂತೋಷವಾಗಿ ಇದ್ದೀರ ನಾವು ಏನು ಮಾಡೋದು ಬಡವರು ಸಾರ್’ ಎಂದು ಕಾಮೆಂಟ್ ಹಾಕುವವರು ನಾನು ಬೆಳೆದ ಹಾದಿಯನ್ನು ನೋಡಬೇಕಿದೆ’ ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.