ಬಹುತೇಕ ಹೊಸಬರಿಂದಲೇ ಕೂಡಿರುವ ‘ಜೈ ಗದಾ ಕೇಸರಿ’ ಚಿತ್ರದ ಟೀಸರ್ ಮತ್ತು ಹಾಡುಗಳು ಇತ್ತೀಚೆಗಷ್ಟೆ ಬಿಡುಗಡೆಗೊಂಡಿವೆ. ಯತೀಶ್‌ಕುಮಾರ್.ವಿ ಮತ್ತು ಮಂಜು ಹೊಸಪೇಟೆ ಜಂಟಿಯಾಗಿ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಬಸವರಾಜ್ ಭಜಂತ್ರಿ ಬಂಡವಾಳ ಹೂಡಿದ್ದಾರೆ.
‘ರಾಮ ಮತ್ತು ಹನುಮಂತನ ಬಗೆಗಿನ ಸಾಕಷ್ಟು ವಿಚಾರಗಳು ಚಿತ್ರದಲ್ಲಿದೆ. ಆಂಜನೇಯನ ಗದೆಗೆ ಪ್ರಾಮುಖ್ಯ ನೀಡಲಾಗಿದ್ದು, ಇದರ ಸುತ್ತ ಸನ್ನಿವೇಶಗಳು ಸಾಗುತ್ತವೆ. ಊರಿನ ದೇವಸ್ಥಾನದಲ್ಲಿರುವ ಗದೆಯ ಮೇಲೆ ಆಕ್ರಮಣ ಮಾಡಲು ದುರುಳರು ಬಂದಾಗ, ಅದನ್ನು ರಕ್ಷಣೆ ಮಾಡಲು ಇಬ್ಬರು ಹುಡುಗರು ಮುಂದಾಗುತ್ತಾರೆ. ಆ ನಂತರ ಯಾವ ರೀತಿಯ ಬೆಳವಣಿಗೆಗಳು ಆಗುತ್ತವೆ ಎಂಬುದೇ ಚಿತ್ರ’ ಎಂದರು ನಿರ್ದೇಶಕರು.
ರಾಜ್ ಚರಣ್ ಬ್ರಹ್ಮಾವರ್ ಮತ್ತು ಈಶ್ವರ ಚಿತ್ರದ ನಾಯಕರು. ಜೀವಿತಾ ವಸಿಷ್ಠ ನಾಯಕಿ. ಅವಿನಾಶ್, ಹೊನ್ನವಳ್ಳಿ ಕೃಷ್ಣ, ಧರ್ಮ, ಅರವಿಂದರಾವ್, ಜಯರಾಮ್ ಮುಂತಾದವರು ನಟಿಸಿದ್ದಾರೆ.
ಕಾರ್ತಿಕ್ ವೆಂಕಟೇಶ್, ಪ್ರಸನ್ನ ಬೋಜಶೆಟ್ಟರ್ ಹಾಗೂ ಥಾಮಸ್ ಸ್ಯಾಮ್ ಸಂಗೀತ ಸಂಯೋಜಿಸಿದ್ದಾರೆ. ಶ್ಯಾಮ್ ಸಿಂಧನೂರು, ಎಸ್.ನಾಗರಾಜ್ ಛಾಯಾಚಿತ್ರಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.