ADVERTISEMENT

ವಿದ್ಯಾ ಬಾಲನ್‌ ನಟನೆಯ ’ಜಲ್ಸಾ’ ಟೀಸರ್‌: ಮಾರ್ಚ್‌ 18ಕ್ಕೆ ಚಿತ್ರ ಬಿಡುಗಡೆ 

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2022, 10:57 IST
Last Updated 5 ಮಾರ್ಚ್ 2022, 10:57 IST
ವಿದ್ಯಾ ಬಾಲನ್‌
ವಿದ್ಯಾ ಬಾಲನ್‌    

ಬಾಲಿವುಡ್‌ ನಟಿ ವಿದ್ಯಾ ಬಾಲನ್‌ ಅಭಿನಯದ ’ಜಲ್ಸಾ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಈ ಚಿತ್ರ ಮಾರ್ಚ್ 18ರಂದು ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗಲಿದೆ.

ವಿದ್ಯಾ ಬಾಲನ್ ಮತ್ತು ಶೆಫಾಲಿ ಷಾ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿರುವ ಈ ಚಿತ್ರವನ್ನು ಸುರೇಶ್ ತ್ರಿವೇಣಿ ನಿರ್ದೇಶನ ಮಾಡಿದ್ದಾರೆ.

ADVERTISEMENT

ಮಾನವ್ ಕೌಲ್, ರೋಹಿಣಿ, ಇಕ್ಬಾಲ್ ಖಾನ್, ವಿಧಾತ್ರಿ ಬಂಡಿ, ಶ್ರೀಕಾಂತ್ ಮೋಹನ್ ಯಾದವ್, ಶಫೀನ್ ಪಟೇಲ್ ಸೇರಿದಂತೆ ಹಲವರು ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.