ADVERTISEMENT

ದಿಂಬು ಹಿಡಿದು ಏರ್‌ಪೋರ್ಟ್‌ಗೆ ಬಂದ ಜಾನ್ವಿ ಕಪೂರ್ ಟ್ರೋಲ್‌ ಮಾಡಿದ ನೆಟ್ಟಿಗರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಮೇ 2023, 8:24 IST
Last Updated 22 ಮೇ 2023, 8:24 IST
ಜಾನ್ವಿ ಕಪೂರ್
ಜಾನ್ವಿ ಕಪೂರ್   

ಮುಂಬೈ: ಬಿಳಿ ಬಣ್ಣದ ದಿಂಬು ಹಿಡಿದುಕೊಂಡು ಏರ್‌ಪೋರ್ಟ್‌ಗೆ ಬಂದ ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ಅವರನ್ನು ನೆಟ್ಟಿಗರು ಟ್ರೋಲ್‌ ಮಾಡಿದ್ದು, ಅಮೀರ್ ಖಾನ್ ಅವರಿಂದ ಸ್ಪೂರ್ತಿ ಪಡೆದಿದ್ದೀರಾ? ಎಂದು ಕೇಳಿದ್ದಾರೆ.

ಇಂದು ವಿಮಾನ ನಿಲ್ದಾಣಕ್ಕೆ ಬಂದಿದ್ದ ಜಾನ್ವಿ ಕಪೂರ್ ಕೈಯಲ್ಲಿ ದಿಂಬು ಹಿಡಿದುಕೊಂಡಿದ್ದರು. ಈ ಹಿಂದೆ ಬಾಲಿವುಡ್‌ ನಟ ಅಮೀರ್ ಖಾನ್‌ ಕೂಡ ವಿಮಾನ ನಿಲ್ದಾಣಕ್ಕೆ ದಿಂಬು ಹಿಡಿದುಕೊಂಡು ಬಂದಿದ್ದರು. ದಿಂಬಿನ ಕಾರಣಕ್ಕೆ ಅಮೀರ್‌ ಖಾನ್ ಟ್ರೋಲ್‌ ಆಗಿದ್ದರು.

ಜಾನ್ವಿ ಕಪೂರ್ ಅವರು ದಿಂಬು ಹಿಡಿದು ಬರುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಅಭಿಮಾನಿಗಳು ಜಾನ್ವಿ ಕಪೂರ್ ನಡೆಗೆ ಸಮರ್ಥನೆ ನೀಡಿದ್ದಾರೆ. ಇನ್ನೂ ಕೆಲವರು ಮನೆಯಲ್ಲಿ ನಿದ್ದೆ ಮಾಡಲು ಸಮಯವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಸದ್ಯ ಜಾನ್ವಿ ಕಪೂರ್ ಜೂನಿಯರ್ ಎನ್‌ಟಿಆರ್‌ ಅವರ 'ದೇವರಾ' ಚಿತ್ರದಲ್ಲಿ ಬ್ಯುಸಿಯಾಗಿದ್ದು, ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲದೇ ರಾಜ್‌ಕುಮಾರ್ ರಾವ್ ಅವರೊಂದಿಗೆ 'ಮಿಸ್ಟರ್ ಆ್ಯಂಡ್ ಮಿಸ್ಸಸ್‌' ಮಹಿ ಚಿತ್ರದಲ್ಲೂ ನಟಿಸಲಿದ್ದಾರೆ. ಅಲ್ಲದೇ ಹೊಸ ಚಿತ್ರ 'ಉಲಾಜ್‌'ನಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.