ADVERTISEMENT

ಶಾಹಿದ್‌ ಕಪೂರ್‌ ನಟನೆಯ ‘ಜೆರ್ಸಿ’ 2ನೇ ಟ್ರೈಲರ್‌: ಇದೇ 14ಕ್ಕೆ ಸಿನಿಮಾ ತೆರೆಗೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 12:24 IST
Last Updated 4 ಏಪ್ರಿಲ್ 2022, 12:24 IST
ಪೋಸ್ಟರ್‌
ಪೋಸ್ಟರ್‌   

ಬೆಂಗಳೂರು: ಕ್ರಿಕೆಟ್ ಕಥಾ ಹಂದರವುಳ್ಳ ತೆಲುಗಿನ ‘ಜೆರ್ಸಿ’ ಸಿನಿಮಾ 2019 ರಲ್ಲಿ ಬಿಡುಗಡೆಯಾಗಿತ್ತು. ಇದೀಗ ಈ ಸಿನಿಮಾ ಬಾಲಿವುಡ್‌ಗೆ ರಿಮೇಕ್‌ ಆಗಿದ್ದು ಇದೇ 14ರಂದು ಬಿಡುಗಡೆಯಾಗಲಿದೆ.

ಬಾಲಿವುಡ್‌ನಲ್ಲಿ ಇದೇ ಸಿನಿಮಾ ‘ಜೆರ್ಸಿ’ ಹೆಸರಿನಲ್ಲೇ ರಿಮೇಕ್ ಆಗಿದ್ದು, ನಟ ಶಾಹಿದ್ ಕಪೂರ್ ಅವರು ತೆಲುಗಿನ ನಾನಿ ಮಾಡಿದ್ದ ಪಾತ್ರ ಮಾಡಿದ್ದಾರೆ. ಈ ಚಿತ್ರದ ಟ್ರೈಲರ್‌ ಸೋಮವಾರ ಬಿಡುಗಡೆಯಾಗಿದ್ದು ಶಾಹಿದ್‌ ಅಭಿಮಾನಿಗಳು ಫಿದಾ ಆಗಿದ್ದಾರೆ.

ಟ್ರೈಲರ್‌ ಬಿಡುಗಡೆಯಾಗಿ ಕೆಲವೇ ಗಂಟೆಯಲ್ಲಿ 7 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿರುವುದು ವಿಶೇಷ.

ADVERTISEMENT

ಶಾಹಿದ್ ಕಪೂರ್, ಮೃಣಾಲ್ ಠಾಕೂರ್, ಪಂಕಜ್ ಕಪೂರ್ ಅವರು ಹಿಂದಿಯ ಜೆರ್ಸಿಯಲ್ಲಿ ಮುಖ್ಯ ತಾರಾಗಣದಲ್ಲಿ ಇದ್ದಾರೆ. ಕೋವಿಡ್‌ ಕಾರಣಗಳಿಂದ ಸಿನಿಮಾ ಬಿಡುಗಡೆ ವಿಳಂಬವಾಗಿತ್ತು. 2021ರ ಡಿಸೆಂಬರ್‌ನಲ್ಲಿ ಚಿತ್ರದ ಮೊದಲಟ್ರೈಲರ್‌ ಬಿಡುಗಡೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.