ADVERTISEMENT

97th Academy Awards: ಯಾವೆಲ್ಲಾ ಒಟಿಟಿಯಲ್ಲಿ ನೇರಪ್ರಸಾರ?

ಪಿಟಿಐ
Published 27 ಫೆಬ್ರುವರಿ 2025, 15:26 IST
Last Updated 27 ಫೆಬ್ರುವರಿ 2025, 15:26 IST
ಆಸ್ಕರ್ ಪ್ರಶಸ್ತಿ
ಆಸ್ಕರ್ ಪ್ರಶಸ್ತಿ   

(ಸಾಂಕೇತಿಕ ಚಿತ್ರ)

ನವದೆಹಲಿ: ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. 97ನೇ ಅಕಾಡೆಮಿ ಅವಾರ್ಡ್​ ಸಮಾರಂಭ ಮಾರ್ಚ್ 3ರಂದು ಲಾಸ್ ಏಂಜಲೀಸ್‌ನ ಓವೇಶನ್ ಹಾಲಿವುಡ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ.

ಭಾರತೀಯ ಕಾಲಮಾನ ಸಂಜೆ 5.30ರಿಂದ ಜಿಯೊಹಾಟ್‌ಸ್ಟಾರ್​ನಲ್ಲಿ ಸಮಾರಂಭದ ನೇರ ಪ್ರಸಾರ ಮಾಡಲಾಗುವುದು ಎಂದು ಪತ್ರಿಕಾ ಪ್ರಕಟಣೆ ತಿಳಿಸಲಾಗಿದೆ. ಅಲ್ಲದೇ ಸ್ಟಾರ್ ಮೂವೀಸ್‌ನಲ್ಲಿಯೂ ಸಮಾರಂಭದ ನೇರ ಪ್ರಸಾರವಾಗಲಿದೆ.

ADVERTISEMENT

ಪ್ರಶಸ್ತಿ ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನು ಎಮ್ಮಿ ಪ್ರಶಸ್ತಿ ವಿಜೇತ ದೂರದರ್ಶನ ನಿರೂಪಕ, ಬರಹಗಾರ, ನಿರ್ಮಾಪಕ ಮತ್ತು ಹಾಸ್ಯನಟ ಕೊನನ್ ಒ'ಬ್ರಿಯಾನ್ (Conan O’Brien) ಹೊತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.