ADVERTISEMENT

ಜೋಕರ್ ಸಿನಿಮಾ ಸರಣಿ ಶೂಟಿಂಗ್ ಆರಂಭ: ಫೋಟೊ ಹಂಚಿಕೊಂಡ ಟಾಡ್ ಫಿಲಿಪ್ಸ್

ಹಾಲಿವುಡ್ ಸಿನಿಮಾ ಜೋಕರ್‌ಗೆ ಭಾರತದಲ್ಲೂ ಉತ್ತಮ ಪ್ರತಿಕ್ರಿಯೆ

ಪಿಟಿಐ
Published 12 ಡಿಸೆಂಬರ್ 2022, 10:48 IST
Last Updated 12 ಡಿಸೆಂಬರ್ 2022, 10:48 IST
   

ಲಾಸ್ ಏಂಜಲೀಸ್: ಹಾಲಿವುಡ್‌ನ ಜನಪ್ರಿಯ ಸಿನಿಮಾ ಜೋಕರ್‌, ಮತ್ತೊಂದು ಹಂತದ ಶೂಟಿಂಗ್‌ಗೆ ಸಜ್ಜಾಗಿದೆ.

ಜೋಕರ್ ಸರಣಿಯ ಹೊಸ ಸಿನಿಮಾ ‘ಜೋಕರ್: ಫಾಲಿ ಎ ಡ್ಯೂಕ್ಸ್‘ ಚಿತ್ರೀಕರಣ ಆರಂಭವಾಗಿದೆ ಎಂದು ನಿರ್ದೇಶಕ ಟಾಡ್ ಫಿಲಿಪ್ಸ್ ಇನ್‌ಸ್ಟಾಗ್ರಾಂ ಮೂಲಕ ಮಾಹಿತಿ ನೀಡಿದ್ದಾರೆ.

ಸಿನಿಮಾದ ಹೀರೊ ಜೋಕಿನ್ ಫೀನಿಕ್ಸ್ ಅವರ ಫೋಟೊ ಒಂದನ್ನು ಫಿಲಿಪ್ಸ್ ಪೋಸ್ಟ್ ಮಾಡಿದ್ದು, ನಮ್ಮ ಹುಡುಗ, ಚಿತ್ರೀಕರಣದ ಮೊದಲ ದಿನ ಎಂದು ಅಡಿಬರಹ ನೀಡಿದ್ದಾರೆ.

ADVERTISEMENT

ದಿ ವಾರ್ನರ್ ಬ್ರದರ್ಸ್ ಜೋಕರ್ ಸರಣಿ ಚಿತ್ರವನ್ನು ನಿರ್ಮಿಸುತ್ತಿದ್ದು, ಅಕ್ಟೋಬರ್ 2024ರಲ್ಲಿ ಬಿಡುಗಡೆ ಮಾಡುವ ಗುರಿ ಹೊಂದಿದ್ದಾರೆ.

ಚಿತ್ರದ ಕುರಿತಂತೆ ಹೆಚ್ಚಿನ ವಿವರವನ್ನು ತಂಡ ಬಿಡುಗಡೆ ಮಾಡಿಲ್ಲ. ಜೋಕರ್ ಚಿತ್ರದ ನಟನೆಗೆ ಜೋಕಿನ್ ಫೀನಿಕ್ಸ್ ಅವರಿಗೆ ಅಸ್ಕರ್ ಪ್ರಶಸ್ತಿ ಸಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.