ADVERTISEMENT

ದಾದಾಸಾಹೇಬ್ ಫಾಲ್ಕೆ ಬಯೋಪಿಕ್‌ನಲ್ಲಿ ಫಾಲ್ಕೆ ಪಾತ್ರಕ್ಕೆ ಜೂನಿಯರ್ ಎನ್‌ಟಿಆರ್?

ದಾದಾಸಾಹೇಬ್ ಫಾಲ್ಕೆ ಅವರ ಜೀವನಾಧಾರಿತ ‘ಮೇಡ್ ಇನ್ ಇಂಡಿಯಾ’ ಎಂಬ ಬಯೋಪಿಕ್ ಸಿನಿಮಾದಲ್ಲಿ ನಟ ಜೂನಿಯರ್ ಎನ್‌ಟಿಆರ್ ಬಣ್ಣ ಹಚ್ಚಲಿದ್ದಾರೆ ಎಂದು ವರದಿಯಾಗಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಮೇ 2025, 9:57 IST
Last Updated 15 ಮೇ 2025, 9:57 IST
<div class="paragraphs"><p>ಜೂನಿಯರ್ ಎನ್‌ಟಿಆರ್</p></div>

ಜೂನಿಯರ್ ಎನ್‌ಟಿಆರ್

   

ಬೆಂಗಳೂರು: ಖ್ಯಾತ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ಅವರು ಪ್ರಸ್ತುತಪಡಿಸಲಿರುವ ದಾದಾಸಾಹೇಬ್ ಫಾಲ್ಕೆ ಅವರ ಜೀವನಾಧಾರಿತ ‘ಮೇಡ್ ಇನ್ ಇಂಡಿಯಾ’ ಎಂಬ ಬಯೋಪಿಕ್ ಸಿನಿಮಾದಲ್ಲಿ ದಾದಾಸಾಹೇಬ್ ಫಾಲ್ಕೆ ಪಾತ್ರದಲ್ಲಿ ನಟ ಜೂನಿಯರ್ ಎನ್‌ಟಿಆರ್ ಬಣ್ಣ ಹಚ್ಚಲಿದ್ದಾರೆ ಎಂದು ವರದಿಯಾಗಿದೆ.

ಮ್ಯಾಕ್ಸ್‌ ಸ್ಟುಡಿಯೊದ ವರುಣ್ ಗುಪ್ತಾ ಹಾಗೂ ಎಸ್‌.ಎಸ್. ರಾಜಮೌಳಿ ಅವರ ಮಗ ಎಸ್‌.ಎಸ್‌.ಕಾರ್ತಿಕೇಯ ಅವರು ‘ಮೇಡ್ ಇನ್ ಇಂಡಿಯಾ’ ನಿರ್ಮಿಸುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನಿತಿನ್ ಕಕ್ಕರ್ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ADVERTISEMENT

ಅದಾಗ್ಯೂ ದಾದಾಸಾಹೇಬ್ ಫಾಲ್ಕೆ ಪಾತ್ರದಲ್ಲಿ ಜೂನಿಯರ್ ಎನ್‌ಟಿಆರ್ ಬಣ್ಣ ಹಚ್ಚಲಿದ್ದಾರೆ ಎಂಬುದರ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಿಲ್ಲ. ಕೆಲ ಮೂಲಗಳ ಆಧಾರದಿಂದ ಇಂಡಿಯಾ ಟುಡೇ ವೆಬ್‌ಸೈಟ್ ವರದಿ ಮಾಡಿದೆ.

ಭಾರತೀಯ ಚಿತ್ರರಂಗದ ಪಿತಾಮಹ ಎಂದು ಹೆಸರಾಗಿರುವ ದಾದಾಸಾಹೇಬ್ ಫಾಲ್ಕೆ ಅವರ ಜೀವನಾಧಾರಿತ ‘ಮೇಡ್ ಇನ್ ಇಂಡಿಯಾ’ 2023 ರಲ್ಲಿ ಘೋಷಣೆಯಾಗಿದೆ. ರಾಜಮೌಳಿ ಅವರು ಈ ಚಿತ್ರವನ್ನು ‍ಪ್ರಸ್ತುತಪಡಿಸಲಿದ್ದಾರೆ.

ಜೂನಿಯರ್ ಎನ್‌ಟಿಆರ್ ಅವರಿಗೆ ಸ್ಕ್ರಿಪ್ಟ್ ಬಗ್ಗೆ ವಿವರಿಸಲಾಗಿದ್ದು ಅವರು ಫಾಲ್ಕೆ ಪಾತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ, ಇನ್ನೇನು ಅಧಿಕೃತ ಘೋಷಣೆಯಷ್ಟೆ ಬಾಕಿ ಎಂದು ವರದಿ ತಿಳಿಸಿದೆ.

1870 ರಲ್ಲಿ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಜನಿಸಿದ್ದ ಫಾಲ್ಕೆ ಅವರು 1944 ರಲ್ಲಿ ಮರಣ ಹೊಂದಿದ್ದಾರೆ. ಅವರು ಭಾರತದಲ್ಲಿ ಮೊದಲ ಬಾರಿಗೆ ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದರು. ಈ ಕಾರಣಕ್ಕೆ ಅವರನ್ನು ಭಾರತೀಯ ಚಿತ್ರರಂಗದ ಪಿತಾಮಹ ಎನ್ನಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.