ADVERTISEMENT

ಕಿಚ್ಚ ಸುದೀಪ್‌ಗೆ ಜುಲೈ 6 ಮರೆಯಲಾಗದ ದಿನ! ಯಾಕೆ?

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 6:55 IST
Last Updated 6 ಜುಲೈ 2021, 6:55 IST
ಸುದೀಪ್‌
ಸುದೀಪ್‌   

ಚಂದನವನದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟ ಕಿಚ್ಚ ಸುದೀಪ್‌ ಅಭಿನಯದ ಹುಚ್ಚ ಸಿನಿಮಾ ತೆರೆಕಂಡು ಇಂದಿಗೆ (ಜುಲೈ 6) 20 ವರ್ಷಗಳಾಗಿವೆ...

2001ರ ಜುಲೈ 6ರಂದು ಹುಚ್ಚ ಸಿನಿಮಾ ಬಿಡುಗಡೆಯಾಗಿತ್ತು. ಭರ್ಜರಿ ಪ್ರದರ್ಶನ ಕಂಡ ಈ ಸಿನಿಮಾ ಸುದೀಪ್‌ ಸಿನಿ ಬದುಕಿನಲ್ಲಿ ಹೊಸ ಮೈಲಿಗಲ್ಲಾಯಿತು. ಇದರಲ್ಲಿನ ಕಿಚ್ಚ ಪಾತ್ರದ ಮೂಲಕ ಸುದೀಪ್‌ ಯುವಕರ ಮನ ಗೆದ್ದರು. ಮುಂದೆ ಕಿಚ್ಚ ಸುದೀಪ್‌ ಆದರು.

2011ರ ಜುಲೈ 6ರಂದು ತೆಲುಗಿನಲ್ಲಿ ‘ಈಗಾ‘ ಸಿನಿಮಾ ತೆರೆಕಂಡಿತು. ರಾಜಮೌಳಿ ನಿರ್ದೇಶನದ ಈ ಸಿನಿಮಾದ ಮೂಲಕ ಸುದೀಪ್‌ ಟಾಲಿವುಡ್‌ ಅಂಗಳದಲ್ಲೂ ನೆಲೆ ಕಂಡುಕೊಂಡರು. ‘ಈಗಾ‘ದಲ್ಲಿನ ವಿಭಿನ್ನ ಅಭಿನಯದ ಮೂಲಕ ತೆಲುಗು ಪ್ರೇಕ್ಷಕರ ಮನ ಗೆದ್ದು, ಬೇಡಿಕೆಯ ನಟರಾಗಿ ಗುರುತಿಸಿಕೊಂಡಿದ್ದಾರೆ.

ADVERTISEMENT

ಹುಚ್ಚ ಮತ್ತು ಈಗಾ ಸಿನಿಮಾಗಳು ಜುಲೈ 6ರಂದು ಬಿಡುಗಡೆಯಾಗಿದ್ದು ವಿಶೇಷ. ಹುಚ್ಚ ಸಿನಿಮಾ ಬಿಡುಗಡೆಯಾಗಿ 20 ವರ್ಷಗಳಾದರೆ, ಈಗಾ ಸಿನಿಮಾ ಬಿಡುಗಡೆಯಾಗಿ 10 ವರ್ಷ ತುಂಬಿರುವುದು ಮತ್ತೊಂದು ವೀಶೇಷ. ಈ ಬಗ್ಗೆ ಟ್ವೀಟ್‌ ಮಾಡಿರುವ ಕಿಚ್ಚ ಸುದೀಪ್‌, ಹುಚ್ಚ ಸಿನಿಮಾದಲ್ಲಿ ಅವಕಾಶ ಕೊಟ್ಟ ನಿರ್ಮಾಪಕ ರೆಹಮಾನ್‌ ಹಾಗೂ ನಿರ್ದೇಶಕ ಓಂ ಪ್ರಕಾಶ್‌ ರಾವ್‌ ಅವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಹಾಗೇ ಈಗಾ ಸಿನಿಮಾದಲ್ಲಿ ಅವಕಾಶ ನೀಡಿದಕ್ಕೆ ರಾಜಮೌಳಿ ಅವರಿಗೂ ಧನ್ಯವಾದ ಅರ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.