
ಕೊರಿಯನ್ ಪಾಪ್ ಸಂಸ್ಕೃತಿ ಕುರಿತಾದ ಕಥೆಯನ್ನು ಹೊಂದಿರುವ ‘ಕೆ ಪಾಪ್’ ಚಿತ್ರದ ಟೈಟಲ್ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಕೆವಿನ್ ಲೂಕ್ ನಿರ್ದೇಶನದ ಚಿತ್ರ ಶೀಘ್ರದಲ್ಲಿ ಸೆಟ್ಟೇರಲಿದೆ.
‘ಕರ್ನಾಟಕ, ನಮ್ಮ ದೇಶ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿ ಕೊರಿಯನ್ ಪಾಪ್ ಸಂಸ್ಕೃತಿ ಹೇಗೆಲ್ಲಾ ಪ್ರಭಾವ ಬೀರಿದೆ ಎನ್ನುವುದನ್ನು ತಿಳಿಸುವ ಪ್ರಯತ್ನ ಇದಾಗಿದೆ. ಇದರೊಂದಿಗೆ ಹಲವು ವಿಷಯಗಳು ಬರುತ್ತವೆ. ಶನಿ, ಯಮನ ಪಾತ್ರಗಳು ಬರುತ್ತವೆ. ಅವರೆಲ್ಲ ಯಾಕೆ ಬರುತ್ತಾರೆ ಎಂಬುದೇ ಚಿತ್ರಕಥೆ. ಕನಸಿನಲ್ಲಿ ನಡೆಯುವ ಕಥೆಯಿದು. ಮುಂದಿನ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ’ ಎಂದರು ನಿರ್ದೇಶಕ.
ಅಲಗಾನಿ ಕಿರಣ್ ಕುಮಾರ್ ಬಂಡವಾಳ ಹೂಡುತ್ತಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಯೋಚಿಸಿದೆ. ಸಂಜಯ್ ಚಿತ್ರದ ನಾಯಕ. ಗರುಡ ರಾಮ್, ವಿಷ್ಣು ಮುಂತಾದವರು ಚಿತ್ರದಲ್ಲಿದ್ದಾರೆ. ರಾಜ್‌ಕಾಂತ್ ಛಾಯಾಚಿತ್ರಗ್ರಹಣ, ಶಶಿಧರ್ ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.