ADVERTISEMENT

ಶ್ರೀಶಾಂತ್ ಈಗ ಮೊಹಮ್ಮದ್​ ಮೊಬಿ: ತಮಿಳು ಸಿನಿಮಾದಲ್ಲಿ ನಟಿಸಲಿರುವ ಕ್ರಿಕೆಟಿಗ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2022, 7:10 IST
Last Updated 10 ಫೆಬ್ರುವರಿ 2022, 7:10 IST
ಪೋಸ್ಟರ್‌
ಪೋಸ್ಟರ್‌   

ಕ್ರಿಕೆಟಿಗ ಶ್ರೀಶಾಂತ್‌(Sreesanth)ತಮ್ಮ ಜೀವನದ ಎರಡನೇ ಇನ್ನಿಂಗ್ಸ್‌ ಆರಂಭಿಸುತ್ತಿದ್ದು, ತಮಿಳುಸಿನಿಮಾನದಲ್ಲಿ ಅಭಿನಯ ಮಾಡುತ್ತಿದ್ದಾರೆ.

ಶ್ರೀಶಾಂತ್‌ ಕ್ರಿಕೆಟ್‌ ಮಾತ್ರವಲ್ಲದೇ ಜಾಹೀರಾತು ಸೇರಿದಂತೆ ಸಿನಿಮಾಗಳಲ್ಲಿ ನಟಿಸುವ ಆಸಕ್ತಿ ಹೊಂದಿದ್ದಾರೆ. ಈ ಸಲ ಅವರಿಗೆಸ್ಟಾರ್​ ನಟ-ನಟಿಯರ ಜೊತೆಗೆ ಅಭಿನಯಿಸುವ ಅವಕಾಶ ಸಿಕ್ಕಿರುವುದುವಿಶೇಷ.

ತಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್​ ಶಿವನ್​ (Vignesh Shivan) ಆ್ಯಕ್ಷನ್​-ಕಟ್​ ಹೇಳುತ್ತಿರುವ ‘ಕಾದು ವಾಕುಲ ರೆಂಡು ಕಾದಲ್​’(Kaathu Vaakula Rendu Kaadhal) ಸಿನಿಮಾದಲ್ಲಿ ಶ್ರೀಶಾಂತ್‌ ಅಭಿನಯಿಸುತ್ತಿದ್ದಾರೆ. ವಿಜಯ್‌ ಸೇತುಪತಿ, ಸಮಂತಾ, ನಯನತಾರಾ ಇದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ADVERTISEMENT

ಮೂರು ದಿನಗಳ ಹಿಂದೆ (ಫೆ.7) ಶ್ರೀಶಾಂತ್​ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಚಿತ್ರತಂಡ ಹೊಸ ಪೋಸ್ಟರ್​ ಬಿಡುಗಡೆ ಮಾಡಿ, ಅದರಲ್ಲಿ ಶ್ರೀಶಾಂತ್​ ಅವರ ಪಾತ್ರದ ಬಗ್ಗೆ ಮಾಹಿತಿ ನೀಡಿತ್ತು.

ಶ್ರೀಶಾಂತ್‌ ‘ಕಾದು ವಾಕುಲ ರೆಂಡು ಕಾದಲ್​’ ಸಿನಿಮಾದಲ್ಲಮೊಹಮ್ಮದ್​ ಮೊಬಿ (Mohammed Mobi) ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕ್ರಿಕೆಟ್​ ಮೈದಾನದಲ್ಲಿ ಚಾಂಪಿಯನ್​ ಆಗಿದ್ದ ಶ್ರೀಶಾಂತ್ ಅವರು ಸಿನಿಮಾರಂಗದಲ್ಲೂ ಆಳ್ವಿಕೆ ಮಾಡುತ್ತಿರುವುದಕ್ಕೆ ಕ್ರಿಕೆಟ್‌ ಅಭಿಮಾನಿಗಳು ಸೇರಿದಂತೆ ಸಿನಿಮಾ ಪ್ರೇಕ್ಷಕರು ಖುಷಿಯಾಗಿದ್ದು, ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ.

ಇದೇ 11ರಂದು ಸಿನಿಮಾದ ಟೀಸರ್​ ಬಿಡುಗಡೆ ಮಾಡುವುದಾಗಿ ವಿಘ್ನೇಶ್​ ಶಿವನ್​ ಹೇಳಿದ್ದಾರೆ. ಟೀಸರ್‌ನಲ್ಲಿ ಶ್ರೀಶಾಂತ್‌ ಲುಕ್‌ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.