ADVERTISEMENT

‘ಕಾಲವೇ ಮೋಸಗಾರ’ ಮಾರ್ಚ್‌ಗೆ ತೆರೆಗೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 12:27 IST
Last Updated 24 ಫೆಬ್ರುವರಿ 2020, 12:27 IST
‘ಕಾಲವೇ ಮೋಸಗಾರ’ ಸಿನಿಮಾದ ಪೋಸ್ಟರ್‌ ಅನ್ನು ಚಿತ್ರದ ನಾಯಕನಟ ಭರತ್‌ ಸಾಗರ್‌, ಸಿನಿಮಾದ ನಿರ್ಮಾಪಕ ಶರಣಪ್ಪ ಕೊಟಗಿ, ಬಂಗಾರೇಶ ಹಿರೇಮಠ, ಸಿದ್ದರಾಮೇಶ್ವರ ಹಿರೇಮಠ ಬಿಡುಗಡೆ ಮಾಡಿದರು –ಪ್ರಜಾವಾಣಿ ವಾರ್ತೆ
‘ಕಾಲವೇ ಮೋಸಗಾರ’ ಸಿನಿಮಾದ ಪೋಸ್ಟರ್‌ ಅನ್ನು ಚಿತ್ರದ ನಾಯಕನಟ ಭರತ್‌ ಸಾಗರ್‌, ಸಿನಿಮಾದ ನಿರ್ಮಾಪಕ ಶರಣಪ್ಪ ಕೊಟಗಿ, ಬಂಗಾರೇಶ ಹಿರೇಮಠ, ಸಿದ್ದರಾಮೇಶ್ವರ ಹಿರೇಮಠ ಬಿಡುಗಡೆ ಮಾಡಿದರು –ಪ್ರಜಾವಾಣಿ ವಾರ್ತೆ   

ಹುಬ್ಬಳ್ಳಿ: ‘ಬಸವಸ್ಪಂದನ’ ಪ್ರೊಡಕ್ಷನ್‌ ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವ ‘ಕಾಲವೇ ಮೋಸಗಾರ’ ಸಿನಿಮಾ ಮಾರ್ಚ್‌ನಲ್ಲಿ ತೆರೆ ಕಾಣಲಿದೆ ಎಂದು ಚಿತ್ರದ ನಾಯಕನಟ ಭರತ್‌ ಸಾಗರ್‌ ತಿಳಿಸಿದರು.

‘ಕಾಲವೇ ಮೋಸಗಾರ’ ಕನ್ನಡ ಸಿನಿಮಾವು ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂನಲ್ಲಿ ‘ಲಾಸ್ಟ್‌ ಪೆಗ್‌’ ಹೆಸರಿನಲ್ಲಿ ಏಕಕಾಲದಲ್ಲಿ ತೆರೆಕಾಣಲಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಆಟಕುಂಟು ಲೆಕ್ಕಕ್ಕಿಲ್ಲ’, ‘ಮಯೂರಿ’, ‘ನಾಗಕನ್ನೆ’ ಚಿತ್ರಗಳಲ್ಲಿ ಈಗಾಗಲೇ ನಟಿಸಿರುವ ನಾನು ಪ್ರಥಮ ಬಾರಿಗೆ ‘ಕಾಲವೇ ಮೋಸಗಾರ’ ಸಿನಿಮಾದಲ್ಲಿ ನಾಯಕನಟನಾಗಿ ನಟಿಸಿದ್ದೇನೆ ಎಂದು ತಿಳಿಸಿದರು.

ADVERTISEMENT

ಪ್ರೀತಿ ಕಥಾವಸ್ತು ಹೊಂದಿರುವ ಈ ಸಿನಿಮಾದಲ್ಲಿ ಯಶಸ್ವಿನಿ ರವೀಂದ್ರ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಂಜಯ್‌ ವದತ್‌ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ಅನುರಾಧ ಭಟ್‌, ಅಂಥೋಣಿ ದಾಸ್‌ ಅವರು ಹಾಡಿದ್ದಾರೆ ಎಂದರು.

ಸಿನಿಮಾದ ನಿರ್ಮಾಪಕ ಶರಣಪ್ಪ ಕೊಟಗಿ, ಬಂಗಾರೇಶ ಹಿರೇಮಠ, ಸಿದ್ದರಾಮೇಶ್ವರ ಹಿರೇಮಠ ಇದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.