
ಬಾಲಿವುಡ್ ಖ್ಯಾತ ನಟಿ ‘ಕಲ್ಪನಾ ಅಯ್ಯರ್’ ತಮ್ಮ 69ನೇ ವಯಸ್ಸಿನಲ್ಲೂ ಅದ್ಭುತ ನೃತ್ಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ವೇದಿಕೆ ಮೇಲೆ ನಟಿ ಕಲ್ಪನಾ ಅಯ್ಯರ್ ಅವರು ‘ರಂಭಾ ಹೋ’ ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ಕಲ್ಪನಾ ಅಯ್ಯರ್ 80 ಮತ್ತು 90 ರ ದಶಕದ ಪ್ರಸಿದ್ಧ ನಟಿ ಮತ್ತು ರೂಪದರ್ಶಿಯಾಗಿದ್ದರು. ಅವರು 'ಸಟ್ಟೆ ಪೆ ಸತ್ತಾ', ‘ಡಿಸ್ಕೋ ಡ್ಯಾನ್ಸರ್’ ಮತ್ತು ‘ಅಂಜಾಮ್’ ನಂತಹ ಅನೇಕ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡವರು.
1981ರಲ್ಲಿ ತೆರೆಕಂಡ ಬಾಲಿವುಡ್ ಸಿನಿಮಾ ‘ಅರ್ಮಾನ್’ನ ಪ್ರಮುಖ ಹಾಡು ‘ರಂಭಾ ಹೋ’ನಲ್ಲಿ ಕಲ್ಪನಾ ಅಯ್ಯರ್ ನೃತ್ಯ ಮಾಡಿದ್ದರು. ಇದೀಗ ಅದೇ ಹಾಡಿಗೆ ಹೆಜ್ಜೆ ಹಾಕಿದ್ದು, ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದ್ದಾರೆ.
ಡ್ಯಾನ್ಸ್ ವಿಡಿಯೊವನ್ನು ನಟಿ ಕಲ್ಪನಾ ಅಯ್ಯರ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಭರ್ಜರಿ ಡ್ಯಾನ್ಸ್ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ‘ಕಲ್ಪನಾ ನೀವು ಅದ್ಭುತ’, ‘ಎಂತಹ ಆಕರ್ಷಕ ಪ್ರದರ್ಶನ ನೀಡಿದ್ದೀರಿ’ ಎಂದು ಕಮೆಂಟ್ ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.