ಸಚಿನ್ ಚಲುವರಾಯಸ್ವಾಮಿ ನಾಯಕನಾಗಿ ನಟಿಸಿರುವ ಕಮಲ್ ಶ್ರೀದೇವಿ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಈ ಚಿತ್ರವನ್ನು ವಿ.ಎ. ಸುನೀಲ್ ಕುಮಾರ್ ನಿರ್ದೇಶಿಸುತ್ತಿದ್ದಾರೆ.
‘ಎಲ್ಲವೂ ನಾವಂದುಕೊಂಡಂತೆ ಆಗಿದೆ.ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ಪ್ರೇಕ್ಷಕರೆದುರಿಗೆ ಬರಲಿದ್ದೇವೆ. ಹಂತಹಂತವಾಗಿ ಸಿನಿಮಾದ ಕುರಿತು ಒಂದೊಂದೇ ವಿಷಯ ತಿಳಿಸುತ್ತ ಹೋಗುತ್ತೇವೆ. ಸಿನಿಮಾ ಆರಂಭದಲ್ಲಿ ನಡೆಯುವ ಒಂದು ಅಪರಾಧವನ್ನು ಯಾರು ಮಾಡಿದ್ದಾರೆ ಎಂಬುದರ ಹಿಂದೆ ಇದರ ಕಥೆ ಸುತ್ತುತ್ತದೆ. ಕಮಲ್ ಮತ್ತು ಶ್ರೀದೇವಿ ನಡುವಿನ ಸಂಬಂಧವೇನು? ಅವರೇಕೆ ಭೇಟಿಯಾಗುತ್ತಾರೆ ಎಂಬಿತ್ಯಾದಿ ಅಂಶಗಳು ಕಥೆಯಲ್ಲಿ ಬರುತ್ತವೆ’ ಎಂದರು ನಿರ್ದೇಶಕರು.
ಸ್ವರ್ಣಾಂಬಿಕ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಬಿ.ಕೆ.ಧನಲಕ್ಷ್ಮಿ ಚಿತ್ರ ನಿರ್ಮಾಣ ಮಾಡಿದ್ದು, ರಾಜವರ್ಧನ್ ಸಹ ನಿರ್ಮಾಣದ ಜತೆಗೆ ಕ್ರಿಯೇಟೀವ್ ಹೆಡ್ ಆಗಿದ್ದಾರೆ. ಸಂಗೀತಾ ಭಟ್ ಶ್ರೀದೇವಿಯಾಗಿ ನಟಿಸಿದ್ದಾರೆ. ಕಿಶೋರ್, ರಮೇಶ್ ಇಂದಿರಾ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಕೀರ್ತನ್ ಸಂಗೀತ, ನಾಗೇಶ್ ವಿ.ಆಚಾರ್ಯ ಛಾಯಾಚಿತ್ರಗ್ರಹಣ, ಜ್ಞಾನೇಶ್ ಬಿ ಮಠದ್ ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.