ADVERTISEMENT

ನಿಮ್ಮವರಿಂದ ಕೊಲೆ ಬೆದರಿಕೆ: ಸೆಪ್ಟಂಬರ್ 9ರಂದು ಮುಂಬೈಗೆ ಬರುತ್ತೇನೆ ಎಂದ ಕಂಗನಾ

ಏಜೆನ್ಸೀಸ್
Published 6 ಸೆಪ್ಟೆಂಬರ್ 2020, 16:04 IST
Last Updated 6 ಸೆಪ್ಟೆಂಬರ್ 2020, 16:04 IST
ಬಾಲಿವುಡ್ ನಟಿ ಕಂಗನಾ ರನೌತ್
ಬಾಲಿವುಡ್ ನಟಿ ಕಂಗನಾ ರನೌತ್   

ಮುಂಬೈ: ಮಹಾರಾಷ್ಟ್ರಕ್ಕೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿ 'ಹರಾಮ್‌ಕೋರ್‌ ಲಡಕಿ' ಎಂದು ಕರೆದಿರುವ ಶಿವಸೇನಾ ಮುಖಂಡ ಸಂಜಯ್ ರಾವುತ್ ಅವರನ್ನು ಗುರಿಯಾಗಿಸಿಕೊಂಡು ಬಾಲಿವುಡ್ ನಟಿ ಕಂಗನಾ ರನೌತ್‌, ಹೊಸ ವಿಡಿಯೊ ಸಂದೇಶವನ್ನು ಹಂಚಿಕೊಂಡಿದ್ದಾರೆ. ಸಂಜಯ್ ಅವರು ತಮ್ಮಮಾತುಗಳ ಮೂಲಕ ಪತ್ನಿಯನ್ನು ಹೊಡೆಯುವವರು, ಲೈಂಗಿಕ ಕಿರುಕುಳ ಮತ್ತು ಸ್ರ್ತೀಯರನ್ನು ದ್ವೇಷಿಸುವವರಿಗೆ ಅಧಿಕಾರ ನೀಡಿದ್ದಾರೆ ಎಂದು ಹೇಳಿದ್ದಾರೆ.

'ಸಂಜಯ್ ರಾವುತ್ ಜಿ, ನಾನು ಹರಾಮ್‌ಕೋರ್ ಹುಡುಗಿ ಎಂದು ಹೇಳಿದ್ದೀರಿ. ನೀವು ಚುನಾಯಿತ ಪ್ರತಿನಿಧಿಯಾಗಿದ್ದೀರಿ. ಹಾಗಾಗಿ ಪ್ರತಿದಿನ ಎಷ್ಟು ಮಹಿಳೆಯರು, ಪ್ರತಿ ಗಂಟೆಗೆ ಅತ್ಯಾಚಾರ, ನಿಂದನೆ, ಚಿತ್ರಹಿಂಸೆ ಮತ್ತು ಕೊಲೆಯಾಗುತ್ತಿದ್ದಾರೆ ಮತ್ತು ಕೆಲಸದ ಸ್ಥಳದಲ್ಲಿ ಕಿರುಕುಳಕ್ಕೊಳಗಾಗುತ್ತಿದ್ದಾರೆ ಎಂಬುದನ್ನು ನೀವು ತಿಳಿದಿರಬೇಕು ಎಂದಿದ್ದಾರೆ.

'ಅದಕ್ಕೆ ಯಾರು ಹೊಣೆ ಎಂದು ನಿಮಗೆ ತಿಳಿದಿದೆಯೇ? ಇದರ ಸಿದ್ಧಾಂತವನ್ನೇ ನೀವು ಸಮಾಜ ಮತ್ತು ದೇಶದ ಮುಂದೆ ಪ್ರದರ್ಶಿಸಿದ್ದೀರಿ. ಈ ದೇಶದ ಹೆಣ್ಣುಮಕ್ಕಳು ನಿಮ್ಮನ್ನು ಕ್ಷಮಿಸುವುದಿಲ್ಲ. ಮಹಿಳೆಯರಿಗೆ ಕಿರುಕುಳ ನೀಡುವ ಎಲ್ಲರಿಗೂ ನೀವು ಅಧಿಕಾರ ನೀಡಿದ್ದೀರಿ ಎಂದು ಹೇಳಿದ್ದಾರೆ'.

ADVERTISEMENT

ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಧನದ ನಂತರ ಮುಂಬೈನಲ್ಲಿ ಅಸುರಕ್ಷಿತ ಭಾವನೆ ಹೊಂದಿದ್ದೇನೆ ಎಂದು ಕಂಗನಾ ಹೇಳಿದ್ದರು. ಇದಕ್ಕೆ ಶಿವಸೇನಾ ಮುಖಂಡರು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದ್ದರು. 'ಆಕೆ ದಯಮಾಡಿ ಮುಂಬೈಗೆ ಬರದಂತೆ ವಿನಂತಿಸುತ್ತೇವೆ. ಇದು ಕೇವಲ ಮುಂಬೈ ಪೊಲೀಸರಿಗೆ ಮಾಡಿದ ಅವಮಾನವಲ್ಲ. ಇದರ ಬಗ್ಗೆ ಗೃಹ ಸಚಿವಾಲಯ ಕ್ರಮ ಕೈಗೊಳ್ಳಬೇಕು' ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಕಂಗನಾ, 'ಶಿವಸೇನಾ ನಾಯಕ ಸಂಜಯ್‌ ರಾವುತ್ ನನಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ನಾನು ಮುಂಬೈಗೆ ಹಿಂತಿರುಗಬಾರದೆಂದು ಅವರು ಹೇಳಿದ್ದಾರೆ. ಮುಂಬೈ ನಗರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಏಕೆ ಭಾಸವಾಗುತ್ತಿದೆ? ಮುಂಬೈ ಪೊಲೀಸರ ' ಎಂದು ಟ್ವೀಟ್ ಮಾಡಿದ್ದರು.

ಈ ದೇಶದಲ್ಲಿ ವಾಸಿಸಲು ಭಯವಾಗುತ್ತಿದೆ ಎಂದು ಅಮೀರ್ ಖಾನ್ ಹೇಳಿದಾಗ ಯಾರು ಕೂಡ ಹರಾಮ್‌ಕೋರ್ ಎಂದು ಕರೆಯಲಿಲ್ಲ ಅಥವಾ ನಸೀರುದ್ಧೀನ್ ಷಾ ಹೇಳಿದಾಗಲೂ ಕರೆಯಲಿಲ್ಲ.
ನನ್ನ ಯಾವುದೇ ಹಳೆಯ ವಿಡಿಯೊಗಳನ್ನು ನೀವು ನೋಡಬಹುದು, ನಾನು ಮುಂಬೈ ಪೊಲೀಸರನ್ನು ಎಂದಿಗೂ ತೆಗಳಿಲ್ಲ. ಪೊಲೀಸರ ಇತ್ತೀಚಿನ ಕೃತ್ಯಗಳಿಂದಾಗಿ ಅವರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿವೆ. ಇದೆಲ್ಲದರ ನಂತರ ನಾನು ಅವರ ಕಾರ್ಯಗಳನ್ನು ಖಂಡಿಸಿದರೆ, ಅದು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ. ಸಂಜಯ್ ಜಿ ನಾನು ನಿಮ್ಮನ್ನು ಖಂಡಿಸುತ್ತೇನೆ. ನೀವೇ ಮಹಾರಾಷ್ಟ್ರ ಅಲ್ಲ ಎಂದು ಹೇಳಿದ್ದಾರೆ.

ಸಂಜಯ್ ಜಿ ನಾನು ಸೆಪ್ಟೆಂಬರ್ 9 ರಂದು ಹಿಂತಿರುಗುತ್ತಿದ್ದೇನೆ ಮತ್ತು ನಿಮ್ಮ ಜನರು ನನ್ನ ದವಡೆ ಮುರಿಯುವುದಾಗಿ, ಕೊಲ್ಲುವುದಾಗಿ ಹೇಳುತ್ತಿದ್ದಾರೆ. ಖಂಡಿತ, ನನ್ನನ್ನು ಕೊಲ್ಲಿ ಏಕೆಂದರೆ ಈ ದೇಶದ ಹಿತಕ್ಕಾಗಿ ತಮ್ಮನ್ನು ತ್ಯಾಗ ಮಾಡಿಕೊಂಡ ಅನೇಕರ ರಕ್ತದಿಂದ ಈ ನೆಲಕ್ಕೆ ನೀರಾವರಿ ಮಾಡಲಾಗಿದೆ. ನಾನು ನನ್ನ ಜೀವವನ್ನು ಸಹ ನೀಡುತ್ತೇನೆ ಏಕೆಂದರೆ ನಾನು ಸಾಲವನ್ನು ಸಹ ಪಾವತಿಸಬೇಕಾಗಿದೆ. ಸೆಪ್ಟೆಂಬರ್ 9ರಂದು ನಾನು ನಿಮ್ಮನ್ನು ನೋಡುತ್ತೇನೆ. ಜೈ ಹಿಂದ್ ಜೈ ಮಹಾರಾಷ್ಟ್ರ ಎನ್ನುವುದರೊಂದಿಗೆ ವಿಡಿಯೊ ಕೊನೆಗೊಂಡಿದೆ.

ಇದಕ್ಕೂ ಮುನ್ನ ಪ್ರತಿಕ್ರಿಯಿಸಿದ್ದ ಸಂಜಯ್ ರಾವುತ್, ‘ಮೊದಲು ಆ ಹುಡುಗಿ (ನಟಿ ಕಂಗನಾ ರನೌತ್‌) ಮಹಾರಾಷ್ಟ್ರದ ಜನತೆಗೆ ಕ್ಷಮೆಯಾಚಿಸಿದರೆ, ನಾನು ಕೂಡ ಕ್ಷಮೆ ಕೋರುವ ಬಗ್ಗೆ ಯೋಚಿಸುತ್ತೇನೆ’ ಎಂದು ಹೇಳಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.