ADVERTISEMENT

ಬಾಲಿವುಡ್‌ ನಟಿ ಕಂಗನಾ, ಸಹೋದರಿ ರಂಗೋಲಿಗೆ ಮೂರನೇ ಬಾರಿ ಸಮನ್ಸ್‌

ನ.23, 24ರಂದು ವಿಚಾರಣೆಗೆ ಹಾಜರಾಗಲು ಸೂಚನೆ

ಪಿಟಿಐ
Published 20 ನವೆಂಬರ್ 2020, 3:12 IST
Last Updated 20 ನವೆಂಬರ್ 2020, 3:12 IST
ಕಂಗನಾ ರನೌತ್
ಕಂಗನಾ ರನೌತ್   

ಮುಂಬೈ: ಬಾಲಿವುಡ್‌ ನಟಿ ಕಂಗನಾ ರನೌತ್‌ ಹಾಗೂ ಅವರ ಸಹೋದರಿ ರಂಗೋಲಿ ಚಾಂಡೇಲಾಗೆ ಮುಂಬೈ ಪೊಲೀಸರು ಮೂರನೇ ಬಾರಿ ಸಮನ್ಸ್‌ ನೀಡಿದ್ದಾರೆ.

ಇದೇ23 (ಕಂಗನಾ) ಮತ್ತು 24 (ರಂಗೋಲಿ) ರಂದು ವಿಚಾರಣೆಗೆ ಬರುವಂತೆ ಇಬ್ಬರಿಗೂ ಪೊಲೀಸರು ಬುಧವಾರ ಸೂಚಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವ ಮೂಲಕ ಕೋಮು ಸಾಮರಸ್ಯ ಕದಡುತ್ತಿರುವ ಆರೋಪ ಇಬ್ಬರ ಮೇಲಿದೆ.

ಅಕ್ಟೋಬರ್26 ಮತ್ತು 27ರಂದು ಬಾಂದ್ರಾ ಪೊಲೀಸರ ಎದುರು ಹಾಜರಾಗುವಂತೆ ಮೊದಲ ಸಮನ್ಸ್‌ನಲ್ಲಿ ಸೂಚಿಸಲಾಗಿತ್ತು. ಇದಕ್ಕೆ ಕಂಗನಾ ಮತ್ತು ಅವರ ಸಹೋದರಿ ಉತ್ತರಿಸಿರಲಿಲ್ಲ. ನ.9 ಮತ್ತು10 ರಂದು ವಿಚಾರಣೆಗೆ ಬರುವಂತೆ ಮತ್ತೊಮ್ಮೆ (ನ.3) ಸಮನ್ಸ್‌ ನೀಡಲಾಗಿತ್ತು. ಕುಟುಂಬದ ಸದಸ್ಯರೊಬ್ಬರ ವಿವಾಹ ಕಾರ್ಯಕ್ರಮ ಇರುವುದರಿಂದ ತಾನು ಹಿಮಾಚಲ ಪ್ರದೇಶದಲ್ಲಿದ್ದು, ನ. 15ರವರೆಗೂ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಕಂಗನಾ ತಮ್ಮ ವಕೀಲರ ಮೂಲಕ ‍ಪೊಲೀಸರಿಗೆ ತಿಳಿಸಿದ್ದರು.

ಕಂಗನಾ ಮತ್ತು ರಂಗೋಲಿ ಅವರ ಟ್ವೀಟ್‌ ಹಾಗೂ ಇತರ ಹೇಳಿಕೆಗಳು ಕೋಮು ಸಾಮರಸ್ಯ ಕದಡುವಂತಿದ್ದು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಾಲಿವುಡ್‌ನ ಫಿಟ್‌ನೆಸ್‌ ಟ್ರೈನರ್ ಮುನಾವರ್‌ ಅಲಿ ಸೈಯದ್‌ ಅವರು ದೂರು ನೀಡಿದ್ದರು. ಇದರ ಆಧಾರದಲ್ಲಿ ಪೊಲೀಸರು ಕಂಗನಾ ಮತ್ತು ರಂಗೋಲಿ ವಿರುದ್ಧ ಐಪಿಸಿ ಸೆಕ್ಷನ್‌153-ಎ ಹಾಗೂ295-ಎ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.