ADVERTISEMENT

‘ಕಂಗುವ’ ಟೀಸರ್‌ನಲ್ಲಿ ಸೂರ್ಯ ಜ್ವಾಲೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2023, 19:37 IST
Last Updated 23 ಜುಲೈ 2023, 19:37 IST
c
c   

ತಮಿಳು ನಟ ಸೂರ್ಯ ಅಭಿನಯದ ‘ಕಂಗುವ’ ಚಿತ್ರದ ಟೀಸರ್ ಬಿಡುಗಡೆಗೊಂಡಿದೆ. 3ಡಿ ಗ್ರಾಫಿಕ್ಸ್‌ನೊಂದಿಗಿನ ಕಾಡು, ಬೆಂಕಿಯಿಂದ ರಾಕ್ಷಸ ಲೋಕವನ್ನೇ ಸುಟ್ಟು ಭಸ್ಮ ಮಾಡುವ ವಿಭಿನ್ನ ಪಾತ್ರದಲ್ಲಿ ಸೂರ್ಯ ಕಾಣಿಸಿಕೊಂಡಿದ್ದಾರೆ. ಇದೊಂದು ಶಿಷ್ಟ ಮತ್ತು ದುಷ್ಟರ ನಡುವಿನ ಯುದ್ಧದ ಕಥೆ ಎಂಬುದು ಟೀಸರ್‌ನಿಂದ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

‘ಸಿಂಗಂ’, ‘ಪರುತ್ತಿವೀರನ್’ ಮುಂತಾದ ಜನಪ್ರಿಯ ಚಿತ್ರಗಳನ್ನು ನಿರ್ಮಿಸಿರುವ ಕೆ.ಇ.ಜ್ಞಾನವೇಲ್ ರಾಜ, ತಮ್ಮ ಸ್ಟೂಡಿಯೋ ಗ್ರೀನ್ ಸಂಸ್ಥೆಯಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರಜನಿಕಾಂತ್‌ ಅವರ ‘ಅಣ್ಣಾತ್ತೆ’ ಸೇರಿದಂತೆ ಹಿಟ್‌ ಸಿನಿಮಾಗಳನ್ನು ನೀಡಿದ್ದ ಶಿವ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರೀಕರಣ ಪ್ರಗತಿಯಲ್ಲಿದ್ದು, 2024ರಲ್ಲಿ ಜಗತ್ತಿನಾದ್ಯಂತ 10 ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರ ಬಿಡುಗಡೆಯಾಗಲಿದೆ.

ಬಾಲಿವುಡ್‌ನ ಜನಪ್ರಿಯ ನಟಿ ದಿಶಾ ಪಠಾಣಿ ಈ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ‘ರಾಕ್ ಸ್ಟಾರ್’ ಎಂದೇ ಜನಪ್ರಿಯರಾಗಿರುವ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ, ವೆಟ್ರಿ ಪಳನಿಸ್ವಾಮಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.