
ಪ್ರಜಾವಾಣಿ ವಿಶೇಷ
ಕನ್ನಡ ಚಿತ್ರಗಳಲ್ಲಿ ನಟಿಸಿರುವ ನಟ ವಿರೇನ್ ಕೇಶವ್ ಕಾಲಿವುಡ್‌ಗೆ ಹೆಜ್ಜೆ ಇಟ್ಟಿದ್ದಾರೆ. ‘ಯುವನ್ ರಾಬಿನ್‌ಹುಡ್’ ಎಂಬ ತಮಿಳು ಸಿನಿಮಾದಲ್ಲಿ ವಿರೇನ್ ಮುಖ್ಯಭೂಮಿಕೆಯಲ್ಲಿದ್ದಾರೆ.
ಶಿವಮೊಗ್ಗದ ವಿರೇನ್ ‘ಕಾಕ್ಟೇಲ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು. ಪುನೀತ್ ರಾಜ್‌ಕುಮಾರ್ ಅಭಿನಯದ ‘ಯುವರತ್ನ’ದಲ್ಲಿ ಸಣ್ಣದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಪ್ಯಾಶನ್ ಮೂವೀ ಮೇಕರ್ಸ್ ಅಡಿಯಲ್ಲಿ ಸಂತೋಷ್ ಕುಮಾರ್ ನಿರ್ದೇಶನ ಮಾಡುತ್ತಿರುವ ‘ಯುವನ್ ರಾಬಿನ್‌ಹುಡ್’ ತಮಿಳು ಚಿತ್ರದಲ್ಲಿ ತಲ್ಲೀನರಾಗಿದ್ದಾರೆ. ಜೊತೆಗೆ ‘ಬಸ್ರಿಕಟ್ಟೆ’ ಸಿನಿಮಾ ನಿರ್ದೇಶನ ಮಾಡಿದ್ದ ವೈಭವ್ ಅವರ ಹೊಸ ಸಿನಿಮಾದಲ್ಲೂ ವಿರೇನ್ ಅಭಿನಯಿಸಲಿದ್ದಾರೆ. ಪ್ರೊಡಕ್ಷನ್ ನಂ.1 ಹೆಸರಿನಲ್ಲಿ ಈ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ಶುರುವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.