ADVERTISEMENT

‘ಅಧ್ಯಕ್ಷ‘ ಖ್ಯಾತಿಯ ನಟಿ ಅರೋಹಿತ ಎಎಪಿ ಸೇರ್ಪಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಸೆಪ್ಟೆಂಬರ್ 2022, 10:03 IST
Last Updated 15 ಸೆಪ್ಟೆಂಬರ್ 2022, 10:03 IST
ನಟಿ ಅರೋಹಿತ ಎಎಪಿ ಸೇರ್ಪಡೆ
ನಟಿ ಅರೋಹಿತ ಎಎಪಿ ಸೇರ್ಪಡೆ   

ಬೆಂಗಳೂರು: ಚಂದನವನದ ನಟಿ ಹಾಗೂ ‘ಅಧ್ಯಕ್ಷ‘ ಸಿನಿಮಾ ಖ್ಯಾತಿಯ ನಟಿ ಅರೋಹಿತ (ಪ್ರಿಯಾಂಕ)ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗಿದ್ದಾರೆ.

ಆಮ್‌ ಆದ್ಮಿ ಪಕ್ಷ (ಎಎಪಿ)ದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು ಅರೋಹಿತ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ನಂತರ ಮಾತನಾಡಿದ ಅವರು ಅರೋಹಿತ ಅಂತಹ ಯುವ ಪ್ರತಿಭೆಗಳು ಸಮಾಜದಲ್ಲಿ ಬದಲಾವಣೆ ತರಬೇಕು. ಇಂತಹಹಂಬಲದೊಂದಿಗೆ ಅವರು ಎಎಪಿ ಸೇರುತ್ತಿದ್ದಾರೆ ಎಂದರು.

ಕರಾಟೆ ಪಟುವಾಗಿರುವ ಅರೋಹಿತ ಬಿ.ಕಾಂ ಪದವಿ ಪಡೆದಿದ್ದಾರೆ. ರಾಜಕೀಯವಾಗಿ ತುಂಬಾ ತಿಳಿದುಕೊಂಡಿರುವ ಅವರು ಪಕ್ಷದ ದೆಹಲಿ ಕಾರ್ಯಕ್ರಮಗಳ ಬಗ್ಗೆ ತುಂಬಾ ಅರಿತಿದ್ದಾರೆ ಎಂದು ಎಎಪಿ ಪಕ್ಷ ಟ್ವೀಟ್‌ ಮಾಡಿದೆ.

ADVERTISEMENT

ಅರೋಹಿತ ಅವರು ಆಟಗಾರ, ಕಿರಿಕ್‌ ಪಾರ್ಟಿ, ಜಗ್ಗಿ, ಭಾಗ್ಯ ರಾಜ್‌,ರಾಜರಾಜೇಂದ್ರ, ಆಯುಷ್ಮಾನ್‌ ಭವ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.