ADVERTISEMENT

‘ಗೋರಿ‘ಯ ಜವಾರಿ ಹಾಡು: ಹುಡುಗಿ ನೋಡಿ ನಕ್ಕರೇ ‘ಬ್ಯಾರೆನೆ ಐತಿ ಅದು ಬ್ಯಾರೆನೆ ಐತಿ’

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 7:28 IST
Last Updated 22 ಫೆಬ್ರುವರಿ 2020, 7:28 IST
ಗೋರಿ ಸಿನಿಮಾದ ದೃಶ್ಯ
ಗೋರಿ ಸಿನಿಮಾದ ದೃಶ್ಯ   

ಬೆಂಗಳೂರು: ಗೋರಿ ಸಿನಿಮಾದ‘ಬ್ಯಾರೆನೆ ಐತಿ, ಅದು ಬ್ಯಾರೆನೆ ಐತಿ’ ಜವಾರಿ ಹಾಡು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

ಕಳೆದ 4 ದಿನಗಳ ಹಿಂದೆ ಬಿಡುಗಡೆಯಾದ ಈ ಜವಾರಿ ಹಾಡಿಗೆ ಉತ್ತಮ ಪ್ರತಿಕ್ರಿಯೆಗಳು ಬಂದಿವೆ.‘ಬ್ಯಾರೆನೆ ಐತಿ, ಅದು ಬ್ಯಾರೆನೆ ಐತಿ’ ಹಾಡನ್ನು ಶಿವು ಬೇರ್ಗಿ ಬರೆದಿದ್ದು ವಿನು ಸಂಗೀತ ಸಂಯೋಜನೆ ಮಾಡಿದ್ದಾರೆ.

ಹಾಸ್ಯ ನಟ ಶರಣ್‌ ಅಭಿನಯದರ‍್ಯಾಂಬೊ2 ಚಿತ್ರದಲ್ಲಿ 'ಚುಟು ಚುಟು' ಎಂಬ ಜವಾರಿ ಹಾಡು ಕೂಡ ಸಾಕಷ್ಟು ಸದ್ದು ಮಾಡಿತ್ತು. ಈಗ ಗೋರಿ ಸಿನಿಮಾದಲ್ಲೂ ಒಂದುಜವಾರಿ ಹಾಡನ್ನು ಸೇರಿಸಲಾಗಿದೆ.

ADVERTISEMENT

ಹುಡಗಿಯೊಬ್ಬಳು ಹುಡುಗನನ್ನು ನೋಡಿ ನಕ್ಕರೆ ಅಥವಾ ಹುಬ್ಬು ಹಾರಿಸಿದರೆಅದು ಬ್ಯಾರೆನೆ ಐತಿ ಎಂದು ಹಾಡಿನ ಉದ್ದಕ್ಕೂ ಹೇಳಲಾಗಿದೆ. ಕಾಲೇಜು ದಿನಗಳಲ್ಲಿನ ಯುವಕ ಯುವತಿಯರ ಪ್ರೇಮ ನಿವೇದನೆಯನ್ನು ಈ ಹಾಡು ನೆನಪಿಸುತ್ತದೆ.

ಇದೇಹಾಡಿನ ಲಿರೀಕಲ್‌ ಸಾಂಗ್‌ ಕೂಡಈ ಹಿಂದೆ ಬಿಡುಗಡೆಯಾಗಿತ್ತು. ಅದಕ್ಕೂ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು

ಜಾತಿ– ಧರ್ಮಕ್ಕಿಂತ ಪ್ರೀತಿ ಮಿಗಿಲಾದುದು, ಪ್ರೀತಿಗಿಂತ ಮಾನವೀಯತೆ ಮಿಗಿಲಾದುದು ಎಂಬ ಸಂದೇಶ ನೀಡಲು ಈ ಸಿನಿಮಾ ಮಾಡಿದ್ದೇವೆ ಎಂದು ಚಿತ್ರತಂಡ ಹೇಳಿದೆ.

ನಾಯಕಕಿರಣ್‌ಗೆಸ್ಮಿತಾ ಜೊತೆಯಾಗಿದ್ದಾರೆ. ಈ ಸಿನಿಮಾವನ್ನು ಗೋಪಾಲಕೃಷ್ಣ ನಿರ್ದೇಶನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.