
ಪ್ರಜಾವಾಣಿ ವಾರ್ತೆಅನೂಯ ಸ್ವಾಮಿ
ಕನ್ನಡದ ಕಿರುಚಿತ್ರ ‘ಪಂಕಜ’ ಮುಂದಿನ ವರ್ಷ ಅಮೆರಿಕದಲ್ಲಿ ನಡೆಯುವ ಸನ್‌ಡ್ಯಾನ್ಸ್ ಚಿತ್ರೋತ್ಸವಕ್ಕೆ ಆಯ್ಕೆಗೊಂಡಿದೆ. ಅಮೆರಿಕದಲ್ಲಿಯೇ ಸಿನಿಮಾ ಪದವಿ ಓದುತ್ತಿರುವ ಕನ್ನಡತಿ ಅನೂಯಾ ಸ್ವಾಮಿ ಈ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ.
‘ಪಂಕಜ’ ಕಿರುಚಿತ್ರವು ಆಘಾತ, ದುಃಖ ಮತ್ತು ನೈತಿಕ ಅಸ್ಪಷ್ಟತೆಯಂತಹ ಸಂಕೀರ್ಣ ವಿಷಯಗಳನ್ನು ಹೊಂದಿದೆ. ಮಹಿಳೆಯರು ಮತ್ತು ಮೈಬಣ್ಣಗಳ ಆಂತರಿಕ ಸಂಬಂಧ, ಅಳಿವಿನ ಅಂಚಿನಲ್ಲಿರುವ ಸಮುದಾಯಗಳತ್ತ ಗಮನ ಹರಿಸುತ್ತದೆ ಎಂದು ಅನೂಯ ಹೇಳಿದ್ದಾರೆ.
ಸನ್‌ಡ್ಯಾನ್ಸ್ ಅಮೆರಿಕದಲ್ಲಿ ಅತಿದೊಡ್ಡ ಸ್ವತಂತ್ರ ಚಿತ್ರೋತ್ಸವವಾಗಿದ್ದು, 2026ರ ಜನವರಿ 22ರಿಂದ ಫೆಬ್ರುವರಿ 1ರವರೆಗೆ ಉತಾಹ್ನ ಸಾಲ್ಟ್ ಲೇಕ್ ಸಿಟಿಯಲ್ಲಿ ನಡೆಯಲಿದೆ. ಅನೂಯಾ ಸ್ವಾಮಿ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಸಿನಿಮಾ ಮತ್ತು ಟಿವಿ ನಿರ್ಮಾಣದಲ್ಲಿ ಎಂ.ಎಫ್.ಎ ಪದವಿ ಓದುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.