ಕನ್ನಡ ಜನತೆಯಿಂದ ಕಾಂತಾರ ಅಧ್ಯಾಯ–1 ಟ್ರೇಲರ್ ಬಿಡುಗಡೆ
ಬೆಂಗಳೂರು: ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ ಅಧ್ಯಾಯ–1‘ ಕನ್ನಡ ಟ್ರೇಲರ್ ಅನ್ನು ಕನ್ನಡ ಜನತೆಯಿಂದಲೇ ಬಿಡುಗಡೆ ಮಾಡಿಸಲಾಗುವುದು ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿದೆ.
ಇದೇ ಸೆಪ್ಟೆಂಬರ್ 22 ರಂದು, ಮಧ್ಯಾಹ್ನ 12:45ಕ್ಕೆ ಕಾಂತಾರ ಅಧ್ಯಾಯ1‘ ಕನ್ನಡ ಟ್ರೇಲರ್ ಅನ್ನು ಕನ್ನಡ ಜನತೆಯಿಂದಲೇ ಬಿಡುಗಡೆ ಮಾಡಿಸಲಾಗುವುದು ಎಂದು ಹೊಂಬಾಳೆ ಫಿಲ್ಮ್ಸ್ ತಿಳಿಸಿದೆ.
‘ಕಾಂತಾರ ಸಿನಿಮಾವನ್ನು ಮೆಚ್ಚಿ ಬೆಳೆಸಿದ ಕನ್ನಡ ಜನತೆಯಿಂದ, ಕಾಂತಾರ ಚಾಪ್ಟರ್ 1 ಕನ್ನಡ ಟ್ರೇಲರ್ ಬಿಡುಗಡೆ. ನಿಮ್ಮ ಪ್ರೀತಿಯೇ ನಮಗೆ ದೊಡ್ಡ ಶಕ್ತಿ ಎಂದು ಸಂಸ್ಥೆ ಎಕ್ಸ್ ಟ್ವೀಟ್ ಮೂಲಕ ಹೇಳಿದೆ
ಹಿಂದಿಯಲ್ಲಿ ನಟ ಹೃತಿಕ್ ರೋಷನ್, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್, ತಮಿಳಿನಲ್ಲಿ ಶಿವಕಾರ್ತಿಕೇಯನ್ ಅವರು ಟ್ರೈಲರ್ ಅನಾವರಣಗೊಳಿಸಲಿದ್ದಾರೆ. ಕನ್ನಡದಲ್ಲಿ ಕನ್ನಡಿಗ ಸಿನಿಮಾ ಅಭಿಮಾನಿಗಳೇ ಬಿಡುಗಡೆ ಮಾಡುತ್ತಿರುವುದು ವಿಶೇಷ.
'ಈ ಚಿತ್ರವು ಅಕ್ಟೋಬರ್ 2ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ. ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ. ಟ್ರೇಲರ್ ಬಿಡುಗಡೆ ಬಗ್ಗೆ ಹೊಂಬಾಳೆ ಫಿಲ್ಮ್ಸ್,ರಿಷಬ್ ಶೆಟ್ಟಿ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಈ ಹಿಂದೆ ಕಾಂತರ ಸಿನಿಮಾ ಯಶಸ್ಸು ಕಂಡಿತ್ತು. ಸಪ್ತಮಿ ಗೌಡ, ರಿಷಬ್ ಶೆಟ್ಟಿ , ಕಿಶೋರ್, ಅಚ್ಯುತ್ ಕುಮಾರ್ ಸೇರಿಂದತೆ ಅನೇಕರು ಅದರಲ್ಲಿ ನಟಿಸಿದ್ದರು. ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.