ರಾಮ್ ಗೋಪಾಲ್ ವರ್ಮ
ಸ್ಯಾಂಡಲ್‌ವುಡ್ ನಟ ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿರುವ ʻಕಾಂತಾರ ಚಾಪ್ಟರ್ 1ʼ ಸಿನಿಮಾ ಬಗ್ಗೆ ಇಡೀ ವಿಶ್ವವೇ ಕೊಂಡಾಡುತ್ತಿದೆ. ಅ. 2ರಂದು ಕಾಂತಾರ ಸಿನಿಮಾ ವಿಶ್ವಾದ್ಯಂತ ತೆರೆ ಕಂಡಿತು.
ಕಾಂತಾರ ಚಾಪ್ಟರ್ 1 ಬಿಡುಗಡೆ ಬಳಿಕ ರಾಕಿಂಗ್ ಯಶ್ ದಂಪತಿ, ಡಾರ್ಲಿಂಗ್ ಪ್ರಭಾಸ್, ಸಂದೀಪ್ ರೆಡ್ಡಿ ವಂಗಾ ಸೇರಿದಂತೆ ಸಾಕಷ್ಟು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಕಾಂತಾರ ಚಾಪ್ಟರ್ 1 ಸಿನಿಮಾವನ್ನು ವಿಮರ್ಶಿಸಿ, ಬ್ಲಾಕ್‌ಬಸ್ಟರ್ ಎಂದು ಹಾಡಿ ಹೊಗಳುತ್ತಿದ್ದಾರೆ.
ರಾಮ್ ಗೋಪಾಲ್ ವರ್ಮಾ ಹೇಳಿದ್ದೇನು?
‘KANTAAAARRRAAA ಒಂದು ಅದ್ಭುತ. ಭಾರತದ ಉಳಿದೆಲ್ಲ ಸಿನಿಮಾ ನಿರ್ಮಾಪಕರು ಈ ಪ್ರಯತ್ನವನ್ನು ನೋಡಿ ನಾಚಿಕೆ ಪಡಬೇಕು. ರಿಷಬ್ ಶೆಟ್ಟಿ ಮತ್ತು ಅವರ ತಂಡವು ಬಿಜಿಎಂ, ಸೌಂಡ್ ಡಿಸೈನ್, ಸಿನಿಮಾಟೋಗ್ರಫಿ, ಪ್ರೊಡಕ್ಷನ್ ಡಿಸೈನ್ ಮತ್ತು ವಿಎಫ್‌ಎಕ್ಸ್ ಅನ್ನು ಉತ್ತಮವಾಗಿ ಬಳಸಿಕೊಂಡಿದೆ. ಕೇಲವು ವಿಚಾರಗಳನ್ನು ಹೊರತುಪಡಿಸಿ, ಅವರ ಪ್ರಯತ್ನ ಮಾತ್ರ ಕಾಂತಾರ ಅಧ್ಯಾಯ 1 ಬ್ಲಾಕ್‌ಬಸ್ಟರ್ ಆಗಲು ಅರ್ಹವಾಗಿದೆ. ಸೃಜನಶೀಲ ತಂಡವನ್ನು ಕಟ್ಟಿ ಅವರನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಕ್ಕಾಗಿ ಹೊಂಬಾಳೆ ಫಿಲ್ಮ್ಸ್‌ಗೆ ಹ್ಯಾಟ್ಸ್ ಆಫ್’ ಎಂದರು.
‘ರಿಷಬ್ ಶೆಟ್ಟಿ ನೀವು ಶ್ರೇಷ್ಠ ನಿರ್ದೇಶಕರೋ ಅಥವಾ ಶ್ರೇಷ್ಠ ನಟರೋ ಎಂದು ನಾನು ನಿರ್ಧರಿಸಲು ಸಾಧ್ಯವಿಲ್ಲ’ ಎಂದು ರಾಮ್ ಗೋಪಾಲ್ ವರ್ಮಾ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.