
ನಟ ರಿಷಬ್ ಶೆಟ್ಟಿ
ಚಿತ್ರ: ಇನ್‌ಸ್ಟಾಗ್ರಾಂ
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ ಅಧ್ಯಾಯ 1' ಅಕ್ಟೋಬರ್ 2ರಂದು ಜಾಗತಿಕವಾಗಿ 7 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿದೆ. ಮಾತ್ರವಲ್ಲ, 2025ರಲ್ಲಿ ಅತೀ ಹೆಚ್ಚು ಹಣ ಗಳಿಸಿದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೂ ಕಾಂತಾರ ಅಧ್ಯಾಯ–1 ಪಾತ್ರವಾಗಿದೆ.
ಕಾಂತಾರ ತಂಡದ ಕಲಾವಿದರು
'ಕಾಂತಾರ' ಚಿತ್ರವು ಕನ್ನಡ ನೆಲದ ಕಥೆ, ಸಂಸ್ಕೃತಿ ಮತ್ತು ನಂಬಿಕೆಯನ್ನು ವಿಶ್ವದಾದ್ಯಂತ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿದೆ. ಈ ಅಸಾಮಾನ್ಯ ಯಶಸ್ಸು ಕನ್ನಡ ಚಿತ್ರರಂಗಕ್ಕೆ ಹೊಸ ಮಾನದಂಡವನ್ನು ಸ್ಥಾಪಿಸಿದೆ ಮತ್ತು ಪ್ರಾದೇಶಿಕ ಚಲನಚಿತ್ರಗಳ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ.
ನಟ ರಿಷಬ್ ಶೆಟ್ಟಿ ಮತ್ತು ತಂಡ
ಇನ್ನು, ಕಾಂತಾರ ಅಧ್ಯಾಯ 1 ಕಾರ್ಯಾಗಾರ ಹೇಗಿತ್ತು ಎಂಬುದರ ಕುರಿತು ನಟ ರಿಷಬ್ ಶೆಟ್ಟಿ ಅವರು ಫೋಟೊಗಳ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.
‘ನಮ್ಮ ಕಥೆಯ ಎಳೆಯನ್ನು ತಿಳಿಸಿದ ಕ್ಷಣ ಇದು. ಕಾಗದದ ಮೇಲೆ ಬರೆದಿದ್ದ ಪಾತ್ರವು ನನ್ನ ನಟರ ಮೂಲಕ ಜೀವ ಪಡೆದ ಕ್ಷಣ. ನಮ್ಮ ಮೊದಲ ಕಾರ್ಯಾಗಾರವು ಕೇವಲ ಪೂರ್ವಾಭ್ಯಾಸವಾಗಿರಲಿಲ್ಲ. ಅದು ಕಲ್ಪನೆಗೆ ಭಾವನೆಗಳಿಗೆ ಜೀವ ತುಂಬಿತು. ಕಾಂತಾರ ಬುಡಕಟ್ಟಿನ ನನ್ನ ಎಲ್ಲಾ ನಟರ ಬಗ್ಗೆ ನನಗೆ ಪ್ರೀತಿ ಇದೆ’ ಎಂದು ಬರೆದುಕೊಂಡಿದ್ದಾರೆ.
ನಟ ರಿಷಬ್ ಶೆಟ್ಟಿ ಮತ್ತು ತಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.