ಕಾಂತಾರ–ಅಧ್ಯಾಯ 1ರಲ್ಲಿ ರಕ್ಷಿತ್ ಶೆಟ್ಟಿ
ಫೋಟೊ ಕೃಪೆ–ರಕ್ಷಿತ್ ಶೆಟ್ಟಿ ಫೇಸ್‌ಬುಕ್
ಬೆಂಗಳೂರು: ಕಾಂತಾರ ಅಧ್ಯಾಯ 1 ನಿನ್ನೆ (ಗುರುವಾರ) ಬಿಡುಗಡೆಗೊಂಡಿದ್ದು, ವಿಶ್ವದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಅನೇಕ ಸ್ಟಾರ್ ನಟ, ನಟಿಯರು ಈ ಸಿನಿಮಾಗೆ ಶುಭ ಕೋರುತ್ತಿದ್ದಾರೆ. ಸಿನಿಮಾದ ನಿರ್ದೇಶಕ, ನಟ ರಿಷಬ್ ಶೆಟ್ಟಿಯನ್ನು ಅನೇಕರು ಪ್ರಶಂಸಿಸುತ್ತಿದ್ದಾರೆ. ಈ ನಡುವೆ ಕಾಂತಾರ ಅಧ್ಯಾಯ–1 ರಲ್ಲಿ ನಟಿಸಿರುವ ಸಹ ಕಲಾವಿದ ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿನ ನಟನೆ ಹಾಗೂ ರಿಷಬ್ ಶೆಟ್ಟಿ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಸಿನಿಮಾದಲ್ಲಿ ನಟಿಸಿರುವ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ರಕ್ಷಿತ್ ಶೆಟ್ಟಿ, 'ಕಾಂತಾರ ಸಿನಿಮಾದಲ್ಲಿ ನಾನು ಇವತ್ತು ಅಭಿನಯ ಮಾಡಿದ್ದೇನೆ ಅಂದರೆ ಅದಕ್ಕೆ ಮೂಲ ಕಾರಣ ರಿಷಬ್ ಅಣ್ಣ. ಭದ್ರಾವತಿಯ ಯಾವುದೋ ಹಳ್ಳಿಯಲ್ಲಿ ಮರೆಯಾಗಬೇಕಾಗಿದ್ದ ನಾನು ಇಂದು ಜನ ಗುರುತಿಸುವ ಮಟ್ಟಕ್ಕೆ ನನ್ನನ್ನು ಎತ್ತರದ ಸ್ಥಾನಕ್ಕೆ ಕಳಿಸಿಕೊಟ್ಟಂತ ನನ್ನ ಅಂತರಂಗದ ದೈವ ನನ್ನ ರಿಷಬ್ ಅಣ್ಣ' ಎಂದು ಹೊಗಳಿದ್ದಾರೆ.
ಮುಂದುವರೆದು 'ಓದುವ ನಿಮಗೆ ಕೊಂಚ ಜಾಸ್ತಿ ಅನಿಸಬಹುದು, ಆದರೆ ಇದೇ ಸತ್ಯ. ಅಣ್ಣ ಥ್ಯಾಂಕ್ಯೂ ಈ ಪದ ತುಂಬಾ ಸಣ್ಣದು, ನನ್ನ ಮುಂದಿನ ಸಿನಿಮಾದ ಪಯಣ ಪ್ರತಿ ಹೆಜ್ಜೆಯೂ ನೀವು ಹಾಕಿಕೊಟ್ಟ ದಾರಿನೇ. ಹಾಗೂ ಪ್ರಗತಿ ಅಕ್ಕನಿಗೆ ಯಾವತ್ತೂ ಚಿರಋಣಿ. ಸಿನಿಮಾದ ಬರಹಗಾರರಾದ ಅನಿರುದ್ಧಣ್ಣ, ಶನಿಲ್ ಗುರು ಅಣ್ಣ ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರು ಕಡಿಮೆ. ಅರವಿಂದ್ ಅಣ್ಣ ನಿಮಗೆ ಏನ್ ಹೇಳಲಿ ಇಷ್ಟು ಚಂದ ಕಾಣಲಿಕ್ಕೆ ನೀವೇ ಕಾರಣ ಥ್ಯಾಂಕ್ ಯು ಅರವಿಂದ ಅಣ್ಣ' ಎಂದು ರಿಷಬ್ ಶೆಟ್ಟಿಯನ್ನು ಹೊಗಳಿದ್ದಾರೆ.
ಪ್ಯಾನ್ ಇಂಡಿಯಾ ಅಥವಾ ಪ್ಯಾನ್ ವರ್ಲ್ಡ್ ಕಾಂತಾರದಂತಹ ಸಿನಿಮಾದಲ್ಲಿ ನಾನೊಬ್ಬ ನಟನಾಗಿ ಕಾಣುವುದಕ್ಕೆ ಸಹಕರಿಸಿದ ಹೊಂಬಾಳೆ ಸಂಸ್ಥೆಗೆ ಅನಂತ ಅನಂತ ಧನ್ಯವಾದಗಳು ಎಂದು ಸಹ ನಟ ರಕ್ಷಿತ್ ಶೆಟ್ಟಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.