ADVERTISEMENT

ಕಾಂತಾರ ಚಿತ್ರದಲ್ಲಿ ರಾಕೇಶ್ ಪೂಜಾರಿ ಜೊತೆಗಿನ ನೆನಪು ಹಂಚಿಕೊಂಡ ರಕ್ಷಿತ್ ಶೆಟ್ಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಅಕ್ಟೋಬರ್ 2025, 7:40 IST
Last Updated 16 ಅಕ್ಟೋಬರ್ 2025, 7:40 IST
<div class="paragraphs"><p>ರಕ್ಷಿತ್ ಶೆಟ್ಟಿ ಹಾಗೂ&nbsp;ರಾಕೇಶ್ ಪೂಜಾರಿ</p></div>

ರಕ್ಷಿತ್ ಶೆಟ್ಟಿ ಹಾಗೂ ರಾಕೇಶ್ ಪೂಜಾರಿ

   

ಚಿತ್ರ: ಇನ್‌ಸ್ಟಾಗ್ರಾಮ್

ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ ಚಾಪ್ಟರ್ 1’ ಅ. 2ರಂದು ಅದ್ಧೂರಿಯಾಗಿ ತೆರೆಕಂಡಿತ್ತು. ದೇಶದಾದ್ಯಂತ 7 ಸಾವಿರಕ್ಕೂ ಅಧಿಕ ಪರದೆಯಲ್ಲಿ ಬಿಡುಗಡೆಯಾಗಿದ್ದ ‘ಕಾಂತಾರ ಚಾಪ್ಟರ್‌ 1’ ಮೊದಲ ವಾರದಲ್ಲೇ ₹509.25 ಕೋಟಿ ಗಳಿಕೆ ಮಾಡಿತ್ತು.

ADVERTISEMENT

ಕಾಂತಾರ ಚಾಪ್ಟರ್ 1ರಲ್ಲಿ ಅನೇಕ ಸ್ಟಾರ್ ನಟ, ನಟಿಯರು ಅಭಿನಯಿಸಿದ್ದಾರೆ. ಕಾಂತಾರ ಅಧ್ಯಾಯ–1ರಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಅವರು ಪಪ್ಪೆ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಆದರೆ ದುರಾದೃಷ್ಟವಶಾತ್ ರಾಕೇಶ್ ಪೂಜಾರಿ ಅವರು ಹೃದಯಾಘಾತ ಮೃತಪಟ್ಟಿದ್ದರು. ರಾಕೇಶ್ ಪೂಜಾರಿ ನಿಧನಕ್ಕೆ ಇಡೀ ಚಿತ್ರತಂಡ ಸಂತಾಪ ಸೂಚಿಸಿತ್ತು. 

ಇದೀಗ ಕಾಂತಾರ ಚಾಪ್ಟರ್ 1ರ ಚಿತ್ರೀಕರಣದ ವೇಳೆ ರಕ್ಷಿತ್ ಶೆಟ್ಟಿ ಅವರು ರಾಕೇಶ್ ಪೂಜಾರಿ ಜೊತೆಗೆ ಕ್ಲಿಕ್ಕಿಸಿಕೊಂಡ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಫೋಟೊಗಳ ಜೊತೆಗೆ ‘ಕಾಂತಾರದಲ್ಲಿ ಪೆಪ್ಪೆ ಜೊತೆಯಲ್ಲಿ ಕಳೆದಂತ ಸಮಯ. ನಾವು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇವೆ ಮಗಾ ರಾಕಿ. ನಿನ್ನನ್ನು ತುಂಬಾ ಪ್ರೀತಿಸುತ್ತೇವೆ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.