ADVERTISEMENT

ತೆರೆ ಬರಲು ಸಜ್ಜಾದ ‘ಕಪಟಧಾರಿ’

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 10:06 IST
Last Updated 13 ಅಕ್ಟೋಬರ್ 2020, 10:06 IST
ಕಪಟಧಾರಿ ಪೋಸ್ಟರ್
ಕಪಟಧಾರಿ ಪೋಸ್ಟರ್   

ತೆಲುಗಿನ ಖ್ಯಾತ ನಟ ಸುಮಂತ್‌ ಅವರ ಹೊಸ ಚಿತ್ರ ಕಪಟಧಾರಿ ತೆರೆಗೆ ಬರಲು ಸಿದ್ಧವಾಗಿದೆ. ಸುಮಾರು 6 ತಿಂಗಳ ಕಾಲ ಮನೆಯಲ್ಲಿದ್ದುಕೊಂಡೇ ಚಿತ್ರ ಸಂಬಂಧಿಸಿದ ಕೆಲಸ ಮಾಡುತ್ತಿದ್ದ ಸುಮಂತ್‌ ‘ಕಪಟಧಾರಿ’ ಬಿಡುಗಡೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡಿದ್ದಾರೆ.

‘ಕಪಟಧಾರಿ’ ಬಿಡುಗಡೆಗೆ ಕಾಯುತ್ತಿದೆ. ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಕೊನೆಗೂ ನನ್ನ ಮುಂದಿನ ಚಿತ್ರೀಕರಣ ಆರಂಭವಾಗಿದೆ’ ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಸರಣಿ ಸೋಲಿನ ಚಿತ್ರಗಳ ಬಳಿಕ 2017ರಲ್ಲಿ ಅವರು ಮಲ್ಲಿ ರಾವ ಚಿತ್ರದ ಮೂಲಕ ಮತ್ತೆ ಯಶಸ್ಸಿನತ್ತ ಹೊರಳಿದರು. ‘ಸುಬ್ರಹ್ಮಣ್ಯಪುರಂ’ ಸಿನಿಮಾ ಕೂಡಾ ಅವರಿಗೆ ಒಳ್ಳೆಯ ಯಶಸ್ಸು ತಂದುಕೊಟ್ಟಿತು.

ADVERTISEMENT

ಈಗ ಕಪಟಧಾರಿ ಚಿತ್ರದಲ್ಲಿ ಅವರು ಗೌತಮ್‌ ಹೆಸರಿನ ಟ್ರಾಫಿಕ್‌ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಪ್ರದೀಪ್ ಕೃಷ್ಣಮೂರ್ತಿ ನಿರ್ದೇಶಿಸಿದ್ದಾರೆ. ವಿಜಯ್‌ ಆ್ಯಂಟೊನಿ, ನಂದಿತಾ ಶ್ವೇತಾ, ಜಯಪ್ರಕಾಶ್‌, ವೆನ್ನೆಲಾ ಕಿಸೋರ್‌, ಸುಮನ್‌ ರಂಗನಾಥ್‌ ಮತ್ತು ಸಂಪತ್‌ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.