ADVERTISEMENT

ಕಪಿಲ್‌ದೇವ್‌ ಪುತ್ರಿ ಬಾಲಿವುಡ್‌ಗೆ ಎಂಟ್ರಿ!

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2019, 10:50 IST
Last Updated 28 ಮಾರ್ಚ್ 2019, 10:50 IST
ಅಮಿಯಾ ದೇವ್‌
ಅಮಿಯಾ ದೇವ್‌   

ಕ್ರಿಕೆಟ್‌ ಜೀವಂತ ದಂತಕಥೆ ಕಪಿಲ್‌ ದೇವ್‌ ಅವರ ಪುತ್ರಿ 23ರ ಹರೆಯದ ಅಮಿಯಾ ದೇವ್‌ ಬಾಲಿವುಡ್ ಪ್ರವೇಶಿಸಿದ್ದಾರೆ. ಅದೂ ಸಹಾಯಕ ನಿರ್ದೇಶಕಿಯಾಗಿ. 1983ರಲ್ಲಿ ಭಾರತ ಕ್ರಿಕೆಟ್‌ ತಂಡ, ಕಪಿಲ್‌ ದೇವ್‌ ನಾಯಕತ್ವದಲ್ಲಿ ವೆಸ್ಟ್ಇಂಡೀಸ್‌ ತಂಡವನ್ನು ಮಣಿಸಿ, ಚೊಚ್ಚಲ ವಿಶ್ವಕಪ್‌ ಎತ್ತಿಹಿಡಿದಿದ್ದು ಗೊತ್ತೇ ಇದೆ. ಈ ಸಾಧನೆಯ ಕಥೆ ಆಧರಿಸಿದ ‘83’ ಚಿತ್ರದ ಮುಖೇನ ಅಮಿಯಾ ದೇವ್‌, ಕಬೀರ್‌ ಖಾನ್‌ ಗರಡಿಯಲ್ಲಿ ಚಿತ್ರ ನಿರ್ದೇಶನದ ವ್ಯಾಕರಣ ಕಲಿಯಲಿದ್ದಾರೆ.

ಮಧು ಮಂತೇನಾ, ವಿಷ್ಣು ಇಂದುರಿ, ಕಬೀರ್‌ ನಿರ್ಮಾಣದಲ್ಲಿ ರಿಲಯನ್ಸ್‌ ಎಂಟರ್‌ಟೈನ್‌ಮೆಂಟ್‌ ಅರ್ಪಿಸುತ್ತಿರುವ ‘83’ ಚಿತ್ರವನ್ನು ಕಬೀರ್ ಖಾನ್‌ ನಿರ್ದೇಶಿಸುತ್ತಿದ್ದಾರೆ. ನಟ ರಣ್‌ವೀರ್‌ ಸಿಂಗ್‌ ಅವರು ಕಪೀಲ್‌ ದೇವ್‌ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಮೇ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ.

ಸ್ಕಾಟ್‌ಲೆಂಡ್‌ ಮತ್ತು ಲಂಡನ್‌ನಲ್ಲಿ 100 ದಿನಗಳ ಕಾಲ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.ಈ ಚಿತ್ರವು ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ನಿರ್ಮಾಣವಾಗಲಿದ್ದು, 2020ರ ಏಪ್ರಿಲ್‌ 10ಕ್ಕೆ ತೆರೆಗೆ ಬರುವ ನಿರೀಕ್ಷೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.