ADVERTISEMENT

ನಟ ಅಜಯ್‌ ದೇವಗನ್‌ ಅಭಿನಯದ ‘ಸಿಂಗಂ ಎಗೇನ್‌’ ಚಿತ್ರೀಕರಣ ಪ್ರಾರಂಭ

ಪಿಟಿಐ
Published 8 ಅಕ್ಟೋಬರ್ 2023, 6:28 IST
Last Updated 8 ಅಕ್ಟೋಬರ್ 2023, 6:28 IST
ನಟ ಅಜಯ್‌ ದೇವಗನ್‌
ನಟ ಅಜಯ್‌ ದೇವಗನ್‌   

ಮುಂಬೈ: ಬಾಲಿವುಡ್‌ ನಟ ಅಜಯ್‌ ದೇವಗನ್‌ ನಟಿಸುತ್ತಿರುವ ಸಿಂಗಂ ಸರಣಿಯ ಮೂರನೇ ಚಿತ್ರ ‘ಸಿಂಗಂ ಎಗೇನ್‌’ ಚಿತ್ರದ ಚಿತ್ರೀಕರಣ ಆರಂಭವಾಗಿದೆ.‌

ಚಿತ್ರೀಕರಣವನ್ನು ನಟಿ ಕರೀನಾ ಕಪೂರ್ ಹಾಗೂ ಚಿತ್ರ ನಿರ್ಮಾಪಕ ರೋಹಿತ್‌ ಶೆಟ್ಟಿ ಅವರು ಪ್ರಾರಂಭಿಸಿದ್ದಾರೆ.

ನಟ ದೇವಗನ್‌ ಅಭಿನಯದ ‘ಸಿಂಗಂ’ ಮೊದಲ ಚಿತ್ರ 2011 ರಲ್ಲಿ ಬಿಡುಗಡೆಗೊಂಡಿತ್ತು, ನಂತರ ಎರಡನೇ ಸರಣಿಯ ‘ಸಿಂಗಂ ರಿಟರ್ನ್ಸ್‌’ನಲ್ಲಿ ಕರೀನಾ ಕೂಡ ನಟಿಸಿದ್ದಾರೆ. ಇದೀಗ ‘ಸಿಂಗಂ ಎಗೇನ್‌’ ಚಿತ್ರದಲ್ಲಿ ಅಜಯ್‌ ದೇವಗನ್‌ ಅವರೊಂದಿಗೆ ರಣವೀರ್‌ ಸಿಂಗ್‌ ಅವರು ಕೂಡ ಕಾಣಿಸಿಕೊಳ್ಳಲಿದ್ದಾರೆ.

ADVERTISEMENT

ಸಿನಿಮಾ ಚಿತ್ರೀಕರಣದ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡಿರುವ ನಟಿ ಕರೀನಾ ಕಪೂರ್‌, ‘ನಾನು ಯಾರ ಜೊತೆ ಚಿತ್ರೀಕರಣ ಮಾಡುತ್ತಿದ್ದೇನೆ ಎಂದು ಹೇಳಬೇಕೆ, ಅವರು ನನ್ನ ಅತ್ಯಂತ ಮೆಚ್ಚಿನ ನಿರ್ದೇಶಕರಲ್ಲಿ ಒಬ್ಬರು, ಇದು ಅವರೊಂದಿಗಿನ ನನ್ನ ನಾಲ್ಕನೇ ಚಿತ್ರವಾಗಿದೆ. ಅವರು ಚಿತ್ರ ನಿರ್ಮಾಪಕ ರೋಹಿತ್‌ ಶೆಟ್ಟಿ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಸಿನಿಮಾದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ರಣವೀರ್‌ ಸಿಂಗ್‌ ಅವರು ಅಭಿನಯಿಸಿರುವ 2018ರಲ್ಲಿ ಬಿಡುಗಡೆಯಾದ ‘ಸಿಂಬಾ’ ಮತ್ತು ಅಕ್ಷಯ್‌ ಕುಮಾರ್‌ ನಟನೆಯ 2021 ರಲ್ಲಿ ಬಿಡುಗಡೆಗೊಂಡ ‘ಸೂರ್ಯವಂಶಿ’ ಎರಡು ಚಿತ್ರಗಳನ್ನು ನಿರ್ಮಾಪಕ ರೋಹಿತ್‌ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಸಿಂಗಂ ಎಗೇನ್‌ ಚಿತ್ರದಲ್ಲಿ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಸಂಗ್ರಾಮ್‌ ಭಲೇರಾಮ್‌ ಅಥವಾ ಸಿಂಬಾ ಪಾತ್ರದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ.

ಕರೀನಾ ಅವರೊಂದಿಗಿನ ತಮ್ಮ ಮೊದಲ ಸಹಯೋಗದ ಚಿತ್ರದ ಬಗ್ಗೆ ಉತ್ಸಾಹವನ್ನು ಹಂಚಿಕೊಂಡಿರುವ ನಟ ರಣವೀರ್‌ ‘ಇದು ರೋಹಿತ್‌ ಅವರೊಂದಿಗಿನ ನನ್ನ ನಾಲ್ಕನೇ ಚಿತ್ರ ಮತ್ತು ಕರೀನಾ ಅವರೊಂದಿಗಿನ ನನ್ನ ಮೊದಲ ಚಿತ್ರವಾಗಿದೆ’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.