ADVERTISEMENT

ಕನ್ನಡ ಒಟಿಟಿ ವೇದಿಕೆ ಸೃಷ್ಟಿ ಯತ್ನ: ಕರ್ನಾಟಕ ಚಲನಚಿತ್ರ ಅಕಾಡೆಮಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 23:30 IST
Last Updated 12 ಫೆಬ್ರುವರಿ 2026, 23:30 IST
ಚಿತ್ರೋತ್ಸವದಲ್ಲಿ ಮಾಸ್ಟರ್‌ ಕ್ಲಾಸ್‌ ನಡೆಸಿಕೊಟ್ಟ ನಿರ್ದೇಶಕ, ನಟ ಅನುರಾಗ್‌ ಕಶ್ಯಪ್‌ ಅವರಿಗೆ ಸ್ಮರಣಿಕೆ ನೀಡುತ್ತಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ. ಸಿನಿಮಾ ವಿಮರ್ಶಕ ಭಾರಧ್ವಾಜ್‌ ರಂಗನ್‌ ಉಪಸ್ಥಿತರಿದ್ದರು. 
ಚಿತ್ರೋತ್ಸವದಲ್ಲಿ ಮಾಸ್ಟರ್‌ ಕ್ಲಾಸ್‌ ನಡೆಸಿಕೊಟ್ಟ ನಿರ್ದೇಶಕ, ನಟ ಅನುರಾಗ್‌ ಕಶ್ಯಪ್‌ ಅವರಿಗೆ ಸ್ಮರಣಿಕೆ ನೀಡುತ್ತಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ. ಸಿನಿಮಾ ವಿಮರ್ಶಕ ಭಾರಧ್ವಾಜ್‌ ರಂಗನ್‌ ಉಪಸ್ಥಿತರಿದ್ದರು.    

ಇತ್ತೀಚೆಗಷ್ಟೇ ಮುಕ್ತಾಯಗೊಂಡ 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಹಲವು ಮಹತ್ತರ ನಿರ್ಧಾರಗಳಿಗೆ ವೇದಿಕೆಯಾಗಿದ್ದು, ಮುಖ್ಯವಾಗಿ ಕನ್ನಡ ಸಿನಿಮಾಗಳಿಗೆ ಪ್ರತ್ಯೇಕ ಒಟಿಟಿ ವೇದಿಕೆ ನಿರ್ಮಿಸಲು ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಯತ್ನ ನಡೆಸಿದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ ಆವರಣದಲ್ಲಿ ಬಹುಪರದೆ ಚಿತ್ರಮಂದಿರಗಳ ನಿರ್ಮಾಣ ಯೋಜನೆಯನ್ನು ರೂಪಿಸಿ ಆರಂಭಿಕ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಅಕಾಡೆಮಿಯ ಚಿತ್ರ ಭಂಡಾರವನ್ನು ತಾಂತ್ರಿಕವಾಗಿ ಬಲಪಡಿಸುವ ಕೆಲಸ ಕೂಡ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ ಈ ಭಂಡಾರ ಹೊಸ ರೂಪದಲ್ಲಿ ಪ್ರೇಕ್ಷಕರಿಗೆ ಲಭ್ಯವಾಗಲಿದೆ. 

65 ದೇಶಗಳ 240ಕ್ಕೂ ಹೆಚ್ಚು ಚಿತ್ರಗಳು ಈ ಸಲ ಚಿತ್ರೋತ್ಸವಕ್ಕೆ ಬಂದಿದ್ದು, 480 ಹೆಚ್ಚು ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ಈ ಸಲ ಅತಿ ಹೆಚ್ಚು ಮಾಸ್ಟರ್‌ಕ್ಲಾಸ್‌ಗಳು ನಡೆದಿವೆ. 18ಕ್ಕೂ ಅಧಿಕ ಸತ್ವಪೂರ್ಣ ಚರ್ಚೆಗಳು ಆಯೋಜನೆಗೊಂಡಿದ್ದವು. 40ಕ್ಕೂ ಹೆಚ್ಚು ಕ್ಲಾಸಿಕ್‌ ಸಿನಿಮಾಗಳನ್ನು ಪ್ರದರ್ಶಿಸಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂತಸ ವ್ಯಕ್ತಪಡಿಸಿದೆ.

ADVERTISEMENT

ಚಿತ್ರೋತ್ಸವದ ಸ್ಥಳ ಬದಲಾದರೂ ಪ್ರೇಕ್ಷಕರು ಬದಲಾಗಲಿಲ್ಲ. ಹಿಂದೆಂದಿಗಿಂತ ಉತ್ತಮ ಪ್ರತಿಕ್ರಿಯೆ ಈ ಸಲದ ಚಿತ್ರೋತ್ಸವಕ್ಕೆ ವ್ಯಕ್ತವಾಗಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.