ADVERTISEMENT

ಜಪಾನ್‌ನಲ್ಲಿ ತೆರೆಕಾಣಲಿದೆ ಕಾರ್ತಿ ಅಭಿನಯದ ಕೈತಿ ಚಿತ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2021, 11:01 IST
Last Updated 10 ನವೆಂಬರ್ 2021, 11:01 IST
ಕೈತಿ ಚಿತ್ರ ಜಪಾನ್‌ನಲ್ಲಿ ತೆರೆಕಾಣುತ್ತಿದೆ..
ಕೈತಿ ಚಿತ್ರ ಜಪಾನ್‌ನಲ್ಲಿ ತೆರೆಕಾಣುತ್ತಿದೆ..   

ಬೆಂಗಳೂರು: ತಮಿಳು ನಟ ಕಾರ್ತಿ ಅಭಿನಯದ ಚಿತ್ರ ‘ಕೈತಿ’ ಜಪಾನ್‌ನಲ್ಲಿ ತೆರೆಕಾಣಲು ಸಜ್ಜಾಗಿದೆ.

ಕಾರ್ತಿ ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದ ಕೈತಿ ಚಿತ್ರ, ತಮಿಳಿನಲ್ಲಿ ಜನಪ್ರಿಯತೆ ಗಳಿಸಿತ್ತು. ಚಿತ್ರ ಜಪಾನ್‌ನಲ್ಲಿ ನವೆಂಬರ್ 19ರಂದು ತೆರೆಕಾಣುತ್ತಿದೆ ಎಂದು ಡ್ರೀಮ್ ವಾರಿಯರ್ ಪಿಕ್ಚರ್ಸ್‌ನ ಎಸ್. ಆರ್. ಪ್ರಭು ಹೇಳಿದ್ದಾರೆ.

ಜಪಾನ್ ಮೂಲದ ವಿತರಕರೊಬ್ಬರು ಸಿನಿಮಾವನ್ನು ಜಪಾನ್‌ನಲ್ಲಿ ಪ್ರದರ್ಶಿಸುವ ಕುರಿತು ತಿಳಿಸಿದ ಬಳಿಕ, ಅದಕ್ಕೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಯಿತು ಎಂದು ಚಿತ್ರದ ನಿರ್ಮಾಪಕರೂ ಆಗಿರುವ ಎಸ್. ಆರ್. ಪ್ರಭು ತಿಳಿಸಿದ್ದಾರೆ.

ADVERTISEMENT

ಕೈತಿ ಸಿನಿಮಾದ ಮೇಕಿಂಗ್ ಮತ್ತು ವ್ಯಾಪ್ತಿಯನ್ನು ಮನಗಂಡ ವಿತರಕರು, ಚಿತ್ರದ ಏರಿಯಾ ರೈಟ್ಸ್ ಕೂಡ ಪಡೆದುಕೊಂಡಿದ್ದಾರೆ. ಚಿತ್ರದಲ್ಲಿ ಯಾವುದೇ ಹಾಡು ಮತ್ತು ನೃತ್ಯದ ದೃಶ್ಯಗಳು ಇಲ್ಲ, ಬದಲಾಗಿ ಕಥೆಯೇ ಪೂರ್ತಿ ಚಿತ್ರವನ್ನು ಆವರಿಸಿಕೊಳ್ಳುತ್ತದೆ. ಹೀಗಾಗಿ ಚಿತ್ರವನ್ನು ಅಲ್ಲಿನವರು ಮೆಚ್ಚಿಕೊಳ್ಳುತ್ತಾರೆ ಎಂದು ನಿರ್ಮಾಪಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.