ADVERTISEMENT

kannada Movies | ಸ್ವಿಟ್ಜರ್ಲೆಂಡ್‌ನಲ್ಲಿ ‘ಕೆಡಿ’

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 0:30 IST
Last Updated 23 ಏಪ್ರಿಲ್ 2025, 0:30 IST
ಸಂಜಯ್‌ ದತ್‌, ಪ್ರೇಮ್‌ 
ಸಂಜಯ್‌ ದತ್‌, ಪ್ರೇಮ್‌    

2025ರ ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಪ್ರೇಮ್‌ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಕೆಡಿ’ ಶೂಟಿಂಗ್‌ ಅಂತಿಮ ಹಂತದಲ್ಲಿದೆ. ಚಿತ್ರದ ಹಾಡೊಂದರ ಚಿತ್ರೀಕರಣದ ಸ್ಥಳ ಹುಡುಕಾಟಕ್ಕಾಗಿ ಚಿತ್ರತಂಡ ಸ್ವಿಟ್ಜರ್ಲೆಂಡ್‌ಗೆ ತೆರಳಿದೆ. 

ಇತ್ತೀಚೆಗೆ ಬಿಡುಗಡೆಯಾಗಿದ್ದ ‘ಸೆಟ್‌ ಆಗಲ್ಲ..’ ಹಾಡಿನ ಚಿತ್ರೀಕರಣ ಸ್ವಿಟ್ಜರ್ಲೆಂಡ್‌ನಲ್ಲಿ ಶೀಘ್ರದಲ್ಲೇ ನಡೆಯಲಿದೆ. ಈ ಹಾಡಿಗೆ ಪ್ರೇಮ್‌ ಅವರೇ ಸಾಹಿತ್ಯ ಬರೆದಿದ್ದು, ಮಿಖಾ ಸಿಂಗ್‌ ದನಿಯಾಗಿದ್ದಾರೆ. ಈ ಹಾಡಿಗೆ ನೃತ್ಯ ನಿರ್ದೇಶನ ಮಾಡುವ ಅವಕಾಶವನ್ನು ಚಿತ್ರತಂಡವು ಪ್ರೇಕ್ಷಕರಿಗೇ ನೀಡಿತ್ತು. ಹಾಡಿಗೆ ಹುಕ್‌ಸ್ಟೆಪ್‌ ಹಾಕಿ ಅದನ್ನು ಚಿತ್ರತಂಡಕ್ಕೆ ಇನ್‌ಸ್ಟಾಗ್ರಾಂ ಮೂಲಕ ಕಳುಹಿಸಿದರೆ ಅತ್ಯುತ್ತಮವಾದುದನ್ನು ಆಯ್ಕೆ ಮಾಡಿಕೊಂಡು ಬಳಸುವುದಾಗಿ ಪ್ರೇಮ್‌ ತಿಳಿಸಿದ್ದರು. ಸಾವಿರಾರು ಜನರು ಈ ಹಾಡಿಗೆ ರೀಲ್ಸ್‌ ಮಾಡಿ ಕಳುಹಿಸಿದ್ದು, ಹಲವು ಸ್ಟೆಪ್ಸ್‌ಗೆ ಧ್ರುವ ಸರ್ಜಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಸಿನಿಮಾದ ಟೀಸರ್‌ ಬಿಡುಗಡೆಗೆ ಸಿದ್ಧತೆ ಆರಂಭಿಸಿರುವ ಚಿತ್ರತಂಡ ಇತ್ತೀಚೆಗೆ ಮುಂಬೈನಲ್ಲಿ ನಟ ಸಂಜಯ್‌ ದತ್‌ ಅವರ ಪಾತ್ರದ ಡಬ್ಬಿಂಗ್‌ ಪೂರ್ಣಗೊಳಿಸಿದೆ. ಶೀಘ್ರದಲ್ಲೇ ಟೀಸರ್‌ ಬಿಡುಗಡೆಯಾಗುವ ಸಾಧ್ಯತೆ ಇದೆ. ಕೆ.ವಿ.ಎನ್. ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಸಂಜಯ್‌ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್‌, ರಮೇಶ್‌ ಅರವಿಂದ್‌ ಚಿತ್ರದ ತಾರಾಬಳಗದಲ್ಲಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.