
ಬಹುತೇಕ ಹೊಸಬರಿಂದಲೇ ಕೂಡಿರುವ ‘ಕೆಂಪು ಹಳದಿ ಹಸಿರು’ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡವು. ಮಣಿ ಕಾರ್ತಿಕೇಯನ್ ನಿರ್ದೇಶನವಿದೆ. ಸನ್‌ರೈಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಮೂಲಕ ಪ್ರಸಾದ್‌ಕುಮಾರ್ ನಾಯ್ಕ್ ಬಂಡವಾಳ ಹೂಡಿದ್ದಾರೆ.
‘ಚಿತ್ರದ ಶೀರ್ಷಿಕೆ ಪಾತ್ರಗಳ ಭಾವನೆಗಳನ್ನು ಹೇಳುತ್ತದೆ. ಕೆಂಪು, ಹಳದಿ, ಹಸಿರು ಎನ್ನುವಂಥ ಮೂರು ಪಾತ್ರಗಳು ಚಿತ್ರದಲ್ಲಿವೆ. ತ್ರಿಕೋನ ಪ್ರೇಮಕಥೆಯೊಂದಿಗೆ ಸಸ್ಪೆನ್ಸ್, ಥ್ರಿಲ್ಲರ್, ಕಾಮಿಡಿ ಜಾನರ್‌ನ ಚಿತ್ರ. ಸಣ್ಣ ಎಳೆ ಬಿಟ್ಟುಕೊಟ್ಟರೂ ಒಟ್ಟಾರೆ ಸಿನಿಮಾದ ಸಾರ ತಿಳಿಸಿದಂತೆ ಆಗುತ್ತದೆ. ಹೀಗಾಗಿ ಈಗಲೇ ಕಥೆ ಹೇಳುವುದಿಲ್ಲ. ಮಂಗಳೂರು, ಉಡುಪಿ ಮುಂತಾದೆಡೆ ಚಿತ್ರೀಕರಣ ನಡೆಸಲಾಗಿದೆ. ಡಿಸೆಂಬರ್ ಮೊದಲನೇ ವಾರದಲ್ಲಿ ತೆರೆಗೆ ತರಲು ಚಿಂತನೆ ನಡೆಸಲಾಗಿದೆ’ ಎಂದರು ನಿರ್ದೇಶಕ.
ಶ್ರೀಹನ್ ದೀಪಕ್ ಚಿತ್ರದ ನಾಯಕ. ದಿವ್ಯಾ ಸುರೇಶ್ ನಾಯಕಿ. ತುಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಅರವಿಂದ್ ಬೋಳಾರ್, ಶೈಲಾಶ್ರೀ ಮುಲ್ಕಿ, ಚಿಂದೋಡಿ ವಿಜಯ್‌ಕುಮಾರ್ ಮುಂತಾದವರು ಅಭಿನಯಿಸಿದ್ದಾರೆ.
ಮಂಜುನಾಥ್ ನಾಯಕ್ ಛಾಯಾಚಿತ್ರಗ್ರಹಣ, ವಿಕಾಸ್ ವಿಶ್ವಕರ್ಮ ಸಂಗೀತ, ಸತೀಶ್ ಈರ್ಲಾ ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.