
ಕೇರಳ ಸ್ಟೋರಿ ಹಾಗೂ ಕೇರಳ ಹೈಕೋರ್ಟ್
– ಪಿಟಿಐ ಚಿತ್ರಗಳು
ತಿರುವನಂತಪುರ: ವಿವಾದಿತ ‘ದಿ ಕೇರಳ ಸ್ಟೋರಿ–2’ ಚಿತ್ರ ಬಿಡುಗಡೆಗೆ ಏಕ ಸದಸ್ಯ ಪೀಠ ನೀಡಿದ್ದ ತಡೆಯನ್ನು ಕೇರಳ ಹೈಕೋರ್ಟ್ ಶುಕ್ರವಾರ ತೆರವುಗೊಳಿಸಿದೆ.
ನ್ಯಾಯಮೂರ್ತಿಗಳಾದ ಎಸ್.ಎ. ಧರ್ಮಾಧಿಕಾರಿ ಹಾಗೂ ಪಿ.ವಿ ಬಾಲಕೃಷ್ಣನ್ ಅವರಿದ್ದ ವಿಭಾಗೀಯ ಪೀಠವು, ನ್ಯಾಯಮೂರ್ತಿ ಬೇಚು ಕುರಿಯನ್ ಥೋಮಸ್ ಅವರು ನೀಡಿದ್ದ ತಡೆ ಆದೇಶವನ್ನು ತೆರವುಗೊಳಿಸಿತು.
ಗುರುವಾರದಂದು ಚಿತ್ರ ಬಿಡುಗಡೆಗೆ 15 ದಿನಗಳ ತಡೆ ನೀಡಿದ್ದ ನ್ಯಾ. ಬೇಚು ಕುರಿಯನ್ ಪೀಠ, ಚಿತ್ರವನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿ ಎಂದು ಸೆನ್ಸಾರ್ ಮಂಡಳಿಗೆ ಸೂಚಿಸಿತ್ತು.
ಗುರುವಾರವೇ ಇದರ ವಿರುದ್ಧ ಚಿತ್ರ ನಿರ್ಮಾಪಕರು ಮೇಲ್ಮನವಿ ಸಲ್ಲಿಸಿದ್ದರು. ಫೆ.27ರಂದು ಸಿನಿಮಾ ಬಿಡುಗಡೆ ಇರುವುದರಿಂದ ತ್ವರಿತ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದ್ದರು. ಸಂಜೆ 7.30ಕ್ಕೆ ವಿಚಾರಣೆ ಆರಂಭಿಸಿದ ವಿಭಾಗೀಯ ಪೀಠವು ಸುಮಾರು 2 ಗಂಟೆ ವಿಸ್ತೃತ ವಿಚಾರಣೆ ನಡೆಸಿ, ಇಂದಿಗೆ ತೀರ್ಪು ಕಾಯ್ದಿರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.