ADVERTISEMENT

ಬ್ರಹ್ಮಾಸ್ತ್ರ ಸಿನಿಮಾದ ಕೇಸರಿಯಾ ವಿಡಿಯೊ ಹಾಡು ಬಿಡುಗಡೆ: ಆಲಿಯಾ–ರಣಬೀರ್ ಮೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜುಲೈ 2022, 12:34 IST
Last Updated 17 ಜುಲೈ 2022, 12:34 IST
ಕೇಸರಿಯಾ
ಕೇಸರಿಯಾ    

ಬೆಂಗಳೂರು: ಅಯಾನ್ ಮುಖರ್ಜಿ ನಿರ್ದೇಶನದರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ (Brahmastra Part One: Shiva)ಸಿನಿಮಾದ ಟ್ರೈಲರ್‌ ಇತ್ತೀಚೆಗೆಬಿಡುಗಡೆಯಾಗಿ ಗಮನ ಸೆಳೆದಿತ್ತು. ಇದೀಗ ಚಿತ್ರತಂಡ ಸಿನಿಪ್ರಿಯರಿಗೆ ಮತ್ತೊಂದು ಉಡುಗೊರೆ ನೀಡಿದ್ದು, ಸಿನಿಮಾ ಬಗ್ಗೆ ಕುತೂಹಲ ಗರಿಗೆದರುವಂತೆ ಮಾಡಿದೆ.

ಫ್ಯಾಂಟಸಿ ಸಿನಿಮಾವಾದಬ್ರಹ್ಮಾಸ್ತ್ರದ ಇಂದು ‘ಕೇಸರಿಯಾ’ ವಿಡಿಯೊ ಹಾಡು ಬಿಡುಗಡೆಯಾಗಿದ್ದು ಕೆಲವೇಗಂಟೆಗಳಲ್ಲಿ ಟ್ರೆಂಡ್ ಆಗಿದೆ.

ಕೇಸರಿಯಾ ಹಾಡನ್ನು ಅರ್ಜಿತ್ ಸಿಂಗ್ ಅವರು ಹಾಡಿದ್ದು, ಗಮನ ಸೆಳೆದಿದೆ. ಚಿತ್ರಕ್ಕೆ ಪ್ರೀತಮ್ ಅವರ ಸಂಗೀತವಿದೆ.ಪ್ರೀತಿ, ಬೆಳಕು, ಬೆಂಕಿ ಚಿತ್ರದ ಹೈಲೆಟ್‌ ಎಂದು ಚಿತ್ರತಂಡ ಹೇಳಿಕೊಂಡಿದೆ.

ADVERTISEMENT

2018ರಲ್ಲಿ ಬ್ರಹ್ಮಾಸ್ತ್ರ ಚಿತ್ರದ ಶೂಟಿಂಗ್ ಆರಂಭವಾಗಿದ್ದು, 2022ರಲ್ಲಿ ಮುಕ್ತಾಯವಾಯಿತು. ಐದು ವರ್ಷಗಳ ಕಾಲ ಈ ಸಿನಿಮಾದ ಶೂಟಿಂಗ್‌ ನಡೆದಿದೆ. ಇದೇಸೆಪ್ಟೆಂಬರ್‌ 9ರಂದು ಚಿತ್ರ ಬಿಡುಗಡೆಯಾಗುತ್ತಿದ್ದು, ಇದು ಮೊದಲ ಭಾಗ ಎಂದು ಚಿತ್ರತಂಡ ಹೇಳಿದೆ.

ಬ್ರಹ್ಮಾಸ್ತ್ರ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದ್ದು, ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಸಂಸ್ಥೆ ಮೂಲಕ ನಿರ್ಮಾಣವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.