ADVERTISEMENT

ಕಿಚ್ಚನ ಮಡಿಲಲ್ಲಿ ಅಮ್ಮ‌: ಅಭಿಮಾನಿಯ ಅದ್ಭುತ ಕಲೆಗೆ ಸುದೀಪ್‌ ಮೆಚ್ಚುಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಸೆಪ್ಟೆಂಬರ್ 2025, 12:54 IST
Last Updated 5 ಸೆಪ್ಟೆಂಬರ್ 2025, 12:54 IST
<div class="paragraphs"><p>ಚಿತ್ರ ಕೃಪೆ:&nbsp;<a href="https://x.com/bharat_bhupathi">bharath bhupathi</a></p></div>

ಚಿತ್ರ ಕೃಪೆ: bharath bhupathi

   

ಸೆಪ್ಟೆಂಬರ್ 2ರಂದು ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಅವರ ಹುಟ್ಟುಹಬ್ಬವಿತ್ತು. ಹೀಗಾಗಿ ಅಭಿಮಾನಿಯೊಬ್ಬರು ಪೆನ್ಸಿಲ್‌ನಲ್ಲಿ ನಟ ಸುದೀಪ್‌ ಹಾಗೂ ತಾಯಿ ಸರೋಜಾ ಸಂಜೀವ್‌ ಅವರ ಚಿತ್ರವನ್ನು ಬಿಡಿಸಿದ್ದಾರೆ.

ಭರತ್ ಎಂಬುವರು ಕಿಚ್ಚ ಸುದೀಪ್‌ ಅವರ ಹುಟ್ಟುಹಬ್ಬಕ್ಕೆ ಈ ಅದ್ಭುತ ಚಿತ್ರಕಲೆಯನ್ನು ಅರ್ಪಿಸಿದ್ದಾರೆ. ಇದೇ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಕಿಚ್ಚ ಸುದೀಪ್‌ ಅವರ ಕಣ್ಣಿಗೂ ಈ ವಿಡಿಯೊ ಬಿದ್ದಿದೆ. ಅಭಿಮಾನಿಯ ಅದ್ಭುತ ಕಲೆಗೆ ನಟ ಸುದೀಪ್‌ ಅವರು ರೀ ಟ್ವೀಟ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

ವಿಡಿಯೊದಲ್ಲಿ ಏನಿದೆ..?

ಅಭಿಮಾನಿ ಭರತ್‌, ಒಂದು ಬಿಳಿ ಹಾಳೆಯ ಮೇಲೆ ಪೆನ್ಸಿಲ್‌ನಿಂದ ನಟ ಸುದೀಪ್‌ ಹಾಗೂ ತಾಯಿ ಸರೋಜಾ ಸಂಜೀವ್‌ ಚಿತ್ರವನ್ನು ಬಿಡಿಸಿದ್ದಾರೆ. ನಟ ಸುದೀ‍ಪ್ ಪುಸ್ತಕವನ್ನು ಓದುತ್ತಿದ್ದು, ಅಮ್ಮ ಕಿಚ್ಚನ ತೊಡೆ ಮೇಲೆ ಮಲಗಿಕೊಂಡಿರೋ ಹಾಗೇ ರೇಖಾಚಿತ್ರ ಬಿಡಿಸಿದ್ದಾರೆ. ಈ ಚಿತ್ರ ಸಂಪೂರ್ಣವಾದ ಬಳಿಕ ಅಭಿಮಾನಿ ಭರತ್‌ ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ನಟ ಸುದೀಪ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.