ADVERTISEMENT

ಸುದೀಪ್‌ ಅಭಿಮಾನಿಗಳಿಗೆ ಶುಭಸುದ್ದಿ: ಮಾರ್ಕ್ ಸಿನಿಮಾ ಬಗ್ಗೆ ಕಿಚ್ಚ ಅಪ್‌ಡೇಟ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ನವೆಂಬರ್ 2025, 6:29 IST
Last Updated 28 ನವೆಂಬರ್ 2025, 6:29 IST
<div class="paragraphs"><p>ನಟ ಕಿಚ್ಚ ಸುದೀಪ್</p></div>

ನಟ ಕಿಚ್ಚ ಸುದೀಪ್

   

ಚಿತ್ರ: ಇನ್‌ಸ್ಟಾಗ್ರಾಮ್ 

ನಟ ಕಿಚ್ಚ ಸುದೀಪ್‌ ಅಭಿನಯದ ‘ಮಾರ್ಕ್’ ಚಿತ್ರದ ಮೊದಲ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಇದೀಗ ಮಾರ್ಕ್ ಸಿನಿಮಾದ ಬಗ್ಗೆ ನಟ ಸುದೀಪ್ ಅವರು ಅಪ್‌ಡೇಟ್ ಒಂದನ್ನು ಕೊಟ್ಟಿದ್ದಾರೆ.

ADVERTISEMENT

ಈ ಕುರಿತು ನಟ ಸುದೀಪ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದಾರೆ. ‘ಸಿದ್ಧರಾಗಿ.. ಮಾರ್ಕ್ ಸಿನಿಮಾ ಟ್ರೇಲರ್ ಮತ್ತು ಹೈ-ವೋಲ್ಟೇಜ್ ಹಾಡಿನೊಂದಿಗೆ ನಿಮ್ಮ ಬಳಿಗೆ ಬರುತ್ತಿದೆ. ಈ ಕ್ರಿಸ್‌ಮಸ್‌ಗೆ ಚಿತ್ರಮಂದಿರಗಳಲ್ಲಿ ಸಿನಿಮಾವು ಹೇಗೆ ಪ್ರದರ್ಶನ ಕಾಣಲಿದೆ ಎಂಬುದರ ಟ್ರೇಲರ್‌ ಬಿಡುಗಡೆ ಮಾಡಲು ಉತ್ಸುಕರಾಗಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

ಸದ್ಯದಲ್ಲೇ ಮಾರ್ಕ್ ಸಿನಿಮಾದ ಟ್ರೇಲರ್ ಬಿಡುಗಡೆ ಆಗುತ್ತಿದೆ ಎಂದು ಸುದೀಪ್ ಅವರು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಸರೆಗಮ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಸಿನಿಮಾದ ಮೊದಲ ಟೀಸರ್ ಬಿಡುಗಡೆಯಾಗಿತ್ತು. ಸಿನಿಮಾದಲ್ಲಿ ಸುದೀಪ್ ಆ್ಯಕ್ಷನ್‌ ದೃಶ್ಯಗಳಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಈಗ ಅಭಿಮಾನಿಗಳು ಮಾರ್ಕ್ ಸಿನಿಮಾದ ಟ್ರೇಲರ್ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ನಟ ಸುದೀಪ್‌ ನಟನೆಯ 47ನೇ ಸಿನಿಮಾ ಇದಾಗಿದ್ದು, ಡಿಸೆಂಬರ್‌ 25ಕ್ಕೆ ತೆರೆಕಾಣಲಿದೆ. ಮಾರ್ಕ್ ಸಿನಿಮಾವನ್ನು ‘ಸತ್ಯಜ್ಯೋತಿ ಫಿಲ್ಮ್ಸ್‌’ ನಿರ್ಮಾಣ ಮಾಡುತ್ತಿದೆ. ಮ್ಯಾಕ್ಸ್‌ ಸಿನಿಮಾ ನಿರ್ದೇಶಿಸಿದ್ದ ತಮಿಳಿನ ವಿಜಯ್ ಕಾರ್ತಿಕೇಯ್ ಅವರೇ ‘ಮಾರ್ಕ್’ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.