ADVERTISEMENT

Sandalwood: ‘ಬಿಆರ್‌ಬಿ’ಯಲ್ಲಿ ಹೀಗಿದ್ದಾರೆ ಸುದೀಪ್‌

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 23:30 IST
Last Updated 4 ಸೆಪ್ಟೆಂಬರ್ 2025, 23:30 IST
ಬಿಆರ್‌ಬಿ 
ಬಿಆರ್‌ಬಿ    

ನಟ ಸುದೀಪ್‌ ಸದ್ಯ ತಮ್ಮ 47ನೇ ಸಿನಿಮಾ ‘ಮಾರ್ಕ್‌’ನ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್‌ ಪೂರ್ಣಗೊಂಡ ಬೆನ್ನಲ್ಲೇ ಮತ್ತೆ ‘ಬಿಲ್ಲ ರಂಗ ಬಾಷಾ’ ಪ್ರಾಜೆಕ್ಟ್‌ ಕೈಗೆತ್ತಿಕೊಳ್ಳಲಿದ್ದಾರೆ. ಅವರ ಜನ್ಮದಿನದಂದು ಚಿತ್ರದಲ್ಲಿನ ಪಾತ್ರದ ಹೊಸ ಲುಕ್‌ ಬಿಡುಗಡೆಯಾಗಿದೆ.

‘ರಂಗಿತರಂಗ’, ‘ರಾಜರಥ’ ಹಾಗೂ ‘ವಿಕ್ರಾಂತ್‌ ರೋಣ’ ಸಿನಿಮಾ ನಿರ್ದೇಶಿಸಿದ್ದ ಅನೂಪ್‌ ಭಂಡಾರಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಪ್ಯಾನ್‌ ಇಂಡಿಯಾ ಸಿನಿಮಾ 2026ರ ವರ್ಷಾಂತ್ಯದಲ್ಲಿ ತೆರೆಕಾಣಲಿದೆ. ಎರಡು ಪಾರ್ಟ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಡಿಸೆಂಬರ್‌ನಲ್ಲಿ ‘ಬಿಲ್ಲ ರಂಗ ಬಾಷಾ’ ಮೊದಲ ಭಾಗದ ಕೊನೆಯ ಹಂತದ ಚಿತ್ರೀಕರಣ ಪುನರಾರಂಭವಾಗಲಿದೆ.

ADVERTISEMENT

ಸಿನಿಮಾಗಾಗಿ ಬೆಂಗಳೂರಿನಲ್ಲಿ ಎಂಟು ಎಕರೆ ಜಾಗದಲ್ಲಿ ಬೃಹತ್‌ ಸ್ಟುಡಿಯೊ ನಿರ್ಮಾಣ ಮಾಡಲಾಗಿದ್ದು, ಹೊಸ ಪ್ರಪಂಚವನ್ನೇ ಅಲ್ಲಿ ಸೃಷ್ಟಿಸಲಾಗಿದೆ. 2209 ಎ.ಡಿ.ಯಲ್ಲಿ ನಡೆಯುವ ಕಥೆ ಇದಾಗಿದ್ದು ಭವಿಷ್ಯದ ಪ್ರಪಂಚವನ್ನು ಅಲ್ಲಿ ನಿರ್ಮಾಣ ಮಾಡಲಾಗಿದೆ.

ಸಿನಿಮಾವನ್ನು ಪ್ರೈಂಶೋ ಎಂಟರ್‌ಟೈನ್‌ಮೆಂಟ್‌ ಪ್ರಸ್ತುತಪಡಿಸುತ್ತಿದ್ದು, ತೆಲುಗಿನ ಹಿಟ್‌ ಸಿನಿಮಾ ‘ಹನುಮಾನ್‌’ ನಿರ್ಮಾಣ ಮಾಡಿದ್ದ ಕೆ.ನಿರಂಜನ್‌ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.