ಮಾರ್ಕ್ ಸಿನಿಮಾ
ಚಿತ್ರ ಕೃಪೆ: ಕಲರ್ಸ್ ಕನ್ನಡ
ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಿ, ಸಖತ್ ಸದ್ದು ಮಾಡಿದ್ದ ನಟ ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಸಿನಿಮಾ, ಇತ್ತೀಚೆಗೆ ಒಟಿಟಿಯಲ್ಲೂ ಪ್ರಸಾರ ಕಂಡಿತ್ತು. ಇದೀಗ, ಈ ಸಿನಿಮಾ ಟಿವಿ ಪರದೆ ಮೇಲೆ ಬರಲು ಕೂಡ ಸಜ್ಜಾಗಿದೆ.
ಮಾರ್ಕ್ ಸಿನಿಮಾ 2025ರ ಡಿಸೆಂಬರ್ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಕಳೆದ ವರ್ಷ ಉತ್ತಮ ಪ್ರದರ್ಶನ ಕಂಡ ಕನ್ನಡದ ಸಿನಿಮಾಗಳ ಸಾಲಿಗೆ ಮಾರ್ಕ್ ಕೂಡ ಸೇರಿತ್ತು. ಸದ್ಯ, ಸಿನಿಮಾವು ಟಿವಿಯಲ್ಲಿ ಪ್ರಸಾರ ಕಾಣುವ ಕುರಿತು ಕಲರ್ಸ್ ಕನ್ನಡ ಪೋಸ್ಟ್ ಹಂಚಿಕೊಂಡಿದೆ.
ಅದರಲ್ಲಿ ‘ಮಾರ್ಕ್ ಆರ್ಭಟ ಶುರುವಾಗ್ತಿದೆ! ಸದ್ಯದಲ್ಲೇ ನಿರೀಕ್ಷಿಸಿ!’ ಎಂದು ಬರೆದಿದೆ. ಆದರೆ ಸಿನಿಮಾ ಬಿಡುಗಡೆಯ ನಿಗದಿತ ದಿನಾಂಕ ಘೋಷಣೆಯಾಗಿಲ್ಲ.
ವಿಜಯ್ ಕಾರ್ತಿಕೇಯ ನಿರ್ದೇಶನದಲ್ಲಿ ಮಾರ್ಕ್ ಚಿತ್ರ ಮೂಡಿ ಬಂದಿದೆ. ಜಿಯೋ ಹಾಟ್‌ಸ್ಟಾರ್ ಓಟಿಟಿಯಲ್ಲಿ ಸಿನಿಮಾ ಲಭ್ಯವಿದೆ. ಸತ್ಯಜ್ಯೋತಿ ಫಿಲ್ಡ್ ಹಾಗೂ ಕಿಚ್ಚ ಕ್ರಿಯೇಷನ್ಸ್ ನಿರ್ಮಾಣದ ಸಹಯೋಗದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಮಾರ್ಕ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ₹50 ಕೋಟಿಗೂ ಅಧಿಕ ಗಳಿಕೆ ಮಾಡಿದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.