ADVERTISEMENT

ಜಾಕ್ವೆಲಿನ್ ಜಾಗಕ್ಕೆ ದೀಪಿಕಾ

​ಪ್ರಜಾವಾಣಿ ವಾರ್ತೆ
Published 8 ಮೇ 2019, 19:30 IST
Last Updated 8 ಮೇ 2019, 19:30 IST
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ   

ಸಲ್ಮಾನ್ ಖಾನ್ ಅಭಿನಯಿಸಲಿರುವ ‘ಕಿಕ್‌–2’ ಸಿನಿಮಾಕ್ಕೆ ನಾಯಕಿ ಯಾರು ಅನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ದೊರಕಿದೆ. ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ನಾಯಕಿಯನ್ನಾಗಿ ಆರಿಸುವ ಮುನ್ನ ಚಿತ್ರತಂಡ, ದೀಪಿಕಾ ಪಡುಕೋಣೆಯನ್ನೂ ಸಂಪರ್ಕಿಸಿತಂತೆ. ಆಗ ಸಿನಿಮಾದ ಕಥೆ ಕೇಳಿ ಇದರಲ್ಲಿ ನಾಯಕಿಗೆ ಅಷ್ಟಾಗಿ ಪ್ರಾಧ್ಯಾನತೆ ಇಲ್ಲ ಎಂದು ದೀಪಿಕಾ ತಿರಸ್ಕರಿಸಿದ್ದರು.

ದೀಪಿಕಾ ಬದಲಿಗೆ ಜಾಕ್ವೆಲಿನ್ ಫರ್ನಾಂಡೀಸ್ ಅನ್ನು ನಾಯಕಿಯಾಗಿ ಆರಿಸಿಯೂ ಆಗಿತ್ತು. ಆದರೂ ಚಿತ್ರ ತಂಡ ದೀಪಿಕಾಳನ್ನು ಎರಡನೇ ಬಾರಿಗೆ ಸಂಪರ್ಕಿಸಿದಾಗ ಒಪ್ಪಿಗೆ ಸಿಕ್ಕಿತಂತೆ. ‘ಕಿಕ್–2’ನಲ್ಲಿ ದೀಪಿಕಾ ಮುಖ್ಯಪಾತ್ರವನ್ನೇ ಮಾಡಲಿದ್ದು, ಸಲ್ಮಾನ್ ಖಾನ್ ಚಿತ್ರಗಳಲ್ಲಿರುವ ಇತರ ನಾಯಕಿರಂತೆ ಪಾತ್ರವಿರುವುದಿಲ್ಲವೆಂದು ಎನ್ನಲಾಗಿದೆ. ಸಲ್ಲೂ ಬಹುತೇಕ ಸಿನಿಮಾಗಳಲ್ಲಿ ನಾಯಕಿಯರು ಮರ ಸುತ್ತುವ ಇಲ್ಲವೇ ನಾಯಕನ ಗುಣಗಾನ ಮಾಡುವ ಪಾತ್ರಗಳನ್ನೇ ಮಾಡುತ್ತಿದ್ದಾರೆ. ಇಂಥ ಪಾತ್ರವಿದ್ದರೆ ನಾನಂತೂ ಬಿಲ್ ಕುಲ್ ಸಿನಿಮಾ ಒಪ್ಪಿಕೊಳ್ಳಲಾರೆ ಎಂದು ದೀಪಿಕಾ ಕಡ್ಡಿತುಂಡಾದಂತೆ ಹೇಳಿಕೊಂಡ ಮೇಲೆಯೇ ಚಿತ್ರತಂಡ ಎಚ್ಚೆತ್ತು ನಾಯಕಿಗೆ ಆದ್ಯತೆ ಇರುವಂತೆ ಕಥೆ ರೂಪಿಸಿದೆ.

ದೀಪಿಕಾ ಪಾತ್ರವನ್ನು ಮತ್ತಷ್ಟು ಮಹತ್ವ ಗಾಣಿಸಲು ನಿರ್ದೇಶಕ ಸಾಜಿದ್ ನಾಡಿಯಾವಾಲಾ ಸ್ಕ್ರಿಪ್ಟ್ ತಿದ್ದುತ್ತಿದ್ದಾರೆ.

ADVERTISEMENT

ಈ ನಡುವೆ ಸಲ್ಲು ‘ಭಾರತ್’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ದೀಪಿಕಾ ಮೇಘನಾ ಗುಲ್ಜಾರ್ ನಿರ್ದೇಶನದ ‘ಛಪಾಕ್’ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.