ADVERTISEMENT

ಚಿತ್ರೀಕರಣ | ಕೋಮಲ್‌ರ ‘ಕಾಲಾಯ ನಮಃ’

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 14:48 IST
Last Updated 24 ನವೆಂಬರ್ 2022, 14:48 IST
ಆಸಿಯಾ ಫಿರ್ದೋಸಿ, ಕೋಮಲ್‌ 
ಆಸಿಯಾ ಫಿರ್ದೋಸಿ, ಕೋಮಲ್‌    

ಚಿತ್ರರಂಗದಿಂದ ಕೆಲಕಾಲ ದೂರವಿದ್ದ ನಟ ಕೋಮಲ್‌ ಕುಮಾರ್‌ ಈಗ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ‘ಕಾಲಾಯ ನಮಃ’ ಅವರ ಹೊಸ ಚಿತ್ರದ ಹೆಸರು. ಚಿತ್ರೀಕರಣ ಭರದಿಂದ ಸಾಗಿದೆ.ಆಸಿಯಾ ಫಿರ್ದೋಸಿ ಚಿತ್ರದ ನಾಯಕಿ. ಮತಿವಣನ್ ಈ ಚಿತ್ರದನಿರ್ದೇಶಕರು.

‘ಕಾಲಭೈರವ ದೇವರ ಭಕ್ತನಾದ ನನ್ನ ಸಿನಿಮಾ ಶೀರ್ಷಿಕೆ ಕೂಡ, ಕಾಲದಿಂದಲೇ ಶುರುವಾಗುತ್ತಿದೆ. ಕಾಲ ನಿಲುವುದಿಲ್ಲ. ಕಾಲ ಯಾರಿಗೂ ಕಾಯುವುದಿಲ್ಲ. ಈ ರೀತಿ ಕಾಲದ ಬಗ್ಗೆ ನಮ್ಮ ಸಿನಿಮಾ ಸಾಗುತ್ತದೆ. ನನ್ನ ಪತ್ನಿ ಅನಸೂಯಾ ಈ ಚಿತ್ರದ ನಿರ್ಮಾಪಕರು. ಮತಿವಣನ್ ನಿರ್ದೇಶಿಸುತ್ತಿದ್ದಾರೆ.‌ ನನ್ನ ಅಣ್ಣ ಜಗ್ಗೇಶ್ ಅವರ ಸಹಕಾರವಿದೆ. ಅಸಿಯಾ ಫಿರ್ದೋಸಿ, ಸುಚೇಂದ್ರ ಪ್ರಸಾದ್,‌ ತಿಲಕ್ ಹಾಗೂ ನನ್ನ ಅಣ್ಣ ಜಗ್ಗೇಶ್ ಅವರ‌ ಪುತ್ರ ಯತಿರಾಜ್ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ.‌ ನಾನು ನಟಿಸಿರುವ 2020 ಚಿತ್ರ ಕೂಡ ಸದ್ಯದಲ್ಲೇ ತೆರೆಗೆ ಬರುತ್ತಿದೆ‌’ ಎಂದು ಕೋಮಲ್ ಕುಮಾರ್

‘ನನಗೆ ಜ್ಯೋತಿಷ್ಯದ ಮೇಲೆ ನಂಬಿಕೆ ಇದೆ. ಕೆಲ ವರ್ಷಗಳ ಹಿಂದೆ ನನ್ನ ಅಣ್ಣ ಜಗ್ಗೇಶ್‌ ಜಾತಕ ನೋಡಿದರು. ನನಗೆ ಕೇತು ದೆಸೆ ನಡೆಯುತ್ತಿದೆ. ಹಾಗಾಗಿ ಹುಷಾರಾಗಿರಬೇಕು ಎಂದಿದ್ದರು. ಹಾಗಾಗಿ ಐದು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದೆ. ಊರಿನ ದೇವರಾದ ಕಾಲಭೈರವನ ಉಪಾಸನೆ ಮಾಡುತ್ತಿದ್ದೆ. ಈಗ ‘ಕಾಲಾಯ ನಮಃ’ದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದರು ಅವರು.

ADVERTISEMENT

ನನ್ನ‌ ಮಗ ಯತಿರಾಜ್ ಕೂಡ ‘ಕಾಲಾಯ ನಮಃ’ದಲ್ಲಿ ಅಭಿನಯಿಸುತ್ತಿದ್ದಾನೆ. ಈ ತಂಡದಿಂದ ಒಳ್ಳೆಯ ಸಿನಿಮಾ ಬರುವ ವಿಶ್ವಾಸವಿದೆ.‌‌ ಒಳ್ಳೆಯದಾಗಲಿ ಎಂದರು ಕೋಮಲ್‌ ಸಹೋದರ, ನಟ ಜಗ್ಗೇಶ್.

ಸುಚೀಂದ್ರ ಪ್ರಸಾದ್, ತಿಲಕ್ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.