ADVERTISEMENT

ಹೊಸ ವರ್ಷದಲ್ಲಿ ‘ಬಾಯೋ’

ತೃಪ್ತಿ .ಎಲ್‌ ಪೂಜಾರಿ
Published 2 ನವೆಂಬರ್ 2018, 19:32 IST
Last Updated 2 ನವೆಂಬರ್ 2018, 19:32 IST
ಇಳಾ ವಿಟ್ಲ
ಇಳಾ ವಿಟ್ಲ   

ಕೊಂಕಣಿ ಚಿತ್ರೋದ್ಯಮದಲ್ಲಿ ಮತ್ತೊಂದು ಹೊಸ ವಿಚಾರ. ಕೋಸ್ಟಲ್‌ವುಡ್‌ನಲ್ಲಿ ಇದೇ ಮೊದಲ ಬಾರಿಗೆ ಆರ್‌.ಎಸ್‌.ಬಿ ಕೊಂಕಣಿ ಭಾಷೆಯಲ್ಲಿ ‘ಬಾಯೋ’ ಚಿತ್ರ ಸಿದ್ಧವಾಗುತ್ತಿದೆ.

ಮಹಿಳಾ ಪ್ರಧಾನ ಚಿತ್ರ ಇದಾಗಿದ್ದು, ಕಾಮತ್‌ ಕ್ರಿಯೇಶನ್ಸ್‌ ಬ್ಯಾನರ್‌ ಅಡಿಯಲ್ಲಿ ಚೊಚ್ಚಲ ಚಿತ್ರ ನಿರ್ಮಾಣವಾಗುತ್ತಿದೆ. ಮಣಿಪಾಲದಲ್ಲಿ ಚಿತ್ರ ಮುಹೂರ್ತ ಈಚೆಗೆ ನಡೆಯಿತು. ಆರ್‌.ಎಸ್‌.ಬಿ ಸಮುದಾಯಕ್ಕೆ ಹೆಣ್ಣಿನ ಕೊಡುಗೆ ಅಪಾರ. ಹಳ್ಳಿ ಹೆಣ್ಣುಮಗಳೊಬ್ಬಳ ಜೀವನದ ಎಡರು ತೊಡರುಗಳು, ಕುಟುಂಬಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡುವ ದಿಟ್ಟ ಮಹಿಳೆಯ ನೈಜ ಕಥೆಯ ಚಿತ್ರವಾಗಿದೆ. ರಂಗಭೂಮಿಯ ಹಾಗೂ ಚಿತ್ರರಂಗದ ಉದಯೋನ್ಮುಖ ಕಲಾವಿದರಿಗೆ ಈ ಚಿತ್ರ ಉತ್ತಮ ವೇದಿಕೆ ನೀಡಿದೆ. ಅಲ್ಲದೇ ಭಾಷಾ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಒಂದು ಚೊಚ್ಚಲ ಕಿರು ಪ್ರಯತ್ನವಾಗಿದೆ ಎಂದು ಚಿತ್ರ ನಿರ್ದೇಶಕ ರಮಾನಂದ್‌ ನಾಯಕ್‌ ಹೇಳುತ್ತಾರೆ.

ಕಾಮತ್ ಕ್ರಿಯೇಶನ್ಸ್ ಅಡಿಯಲ್ಲಿ ಸುಮಾರು ₹ 45 ಲಕ್ಷ ವೆಚ್ಚದಲ್ಲಿ ಚಲನಚಿತ್ರ ಮೂಡಿ ಬರುತ್ತಿದೆ. ತೀರ್ಥಹಳ್ಳಿ ರೆಂಜದಕಟ್ಟೆ ನಾಗೇಂದ್ರ ಕಾಮತ್‌ ನಿರ್ಮಾಪಕರಾಗಿದ್ದಾರೆ.

ADVERTISEMENT

ಇಳ್ಲಾ ವಿಟ್ಲ ಅವರು ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ. ಸಮುದಾಯದ ಹಳ್ಳಿ ಹುಡುಗಿ ಪಾತ್ರದಲ್ಲಿ ತರೆ ಹಂಚಿಕೊಳ್ಳಲಿದ್ದಾರೆ. ಚಿತ್ರದ ಸಂಗೀತ, ನಿರ್ದೇಶನ, ಪರಿಕಲ್ಪನೆ, ತಾರಾಗಣ, ರಂಗಸಜ್ಜಿಕೆ, ಛಾಯಾಗ್ರಹಣ ಹಾಗೂ ಎಲ್ಲಾ ರೀತಿಯ ಸಹಕಾರದಲ್ಲಿ ಸಮುದಾಯದವರೇ ಆಗಿರುವುದು ವೈಶಿಷ್ಟ್ಯಪೂರ್ಣವಾಗಿದೆ.

ಚಿತ್ರದಲ್ಲಿ 2 ಹಾಡುಗಳಿವೆ. ಕಾರ್ಕಳದ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆಯಲಿದೆ. ಅಲ್ಲದೆ ಬೆಂಗಳೂರಿನಲ್ಲಿಯೂ ಚಿತ್ರೀಕರಣವಿದೆ. ಒಟ್ಟು 18 ದಿನಗಳ ಚಿತ್ರೀಕರಣ. ಫೆಬ್ರವರಿಯಲ್ಲಿ ಬಾಯೋ ಚಿತ್ರವನ್ನು ತೆರೆ ಮೇಲೆ ತರಲಾಗುತ್ತದೆ. ಈಗಾಗಲೇ ಚಿತ್ರದ ಮುಹೂರ್ತ ಅ.28ರಂದು ಗೌಡಪಾದಚಾರ್ಯ ಕೈವಲ್ಯ ಮಠಾಧೀಶರಾದ ಶಿವಾನಂದ ಸರಸ್ವತಿ ಸ್ವಾಮೀಜಿ ನೇರವೇರಿಸಿದ್ದಾರೆ .

‘ಇತ್ತೀಚಿನ ದಿನದಲ್ಲಿ ಚಲಚಿತ್ರ ಅತ್ಯಂತ ಪ್ರಭಾವಶಾಲಿಯಾಗಿ ಬೆಳೆಯುತ್ತಿದೆ. ಅದರ ಪ್ರಭಾವ ಪ್ರಾದೇಶಕ ಭಾಷೆಗಳ ಮೇಲೆ ಸಹ ಬೀರಿದೆ. ಕರಾವಳಿ ಕರ್ನಾಟಕದಲ್ಲಿ ಕನ್ನಡದ ಜೊತೆಯಲ್ಲಿ ತುಳು, ಕೊಂಕಣಿ ಭಾಷೆ ಚಿತ್ರಗಳು ಸಾಕಷ್ಟು ಸಂಖ್ಯೆಯಲ್ಲಿ ತಯಾರಾಗಿದ್ದು, ಕಲಾ ಪ್ರೇಕ್ಷಕರ ಮನ್ನಣೆಗೆ ದೊರಕುತ್ತಿದೆ. ಈ ನಿಟ್ಟಿನಲ್ಲಿಆರ್‌.ಎಸ್‌.ಬಿ. ಸಮುದಾಯ ಕೊಂಕಣಿಯಲ್ಲಿ ಚೊಚ್ಚಲ ಚಿತ್ರದ ನಿರ್ಮಾಣವಾಗುತ್ತಿದೆ’ ಎನ್ನುತ್ತಾರೆ ರಮಾನಂದ್‌ ನಾಯಕ್‌ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.