ADVERTISEMENT

ಪೀಸ್‌ಲೆಸ್‌ ‘ಕುಷ್ಕ’ ಟ್ರೇಲರ್: 13 ವರ್ಷಕ್ಕೇ ಬೆಳೆಯೋಕೆ ಶುರುವಾಯ್ತು... ಗಡ್ಡ!

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 9:45 IST
Last Updated 3 ಮಾರ್ಚ್ 2020, 9:45 IST
ಸಂಜನಾ ಆನಂದ್
ಸಂಜನಾ ಆನಂದ್   

ಹಾಲಿವುಡ್‌ನ ‘ಸ್ನ್ಯಾಚ್’, ಬಾಲಿವುಡ್‌ನ ‘ಡೆಲ್ಲಿ ಬೆಲ್ಲಿ’, ‘ಹಂಗಾಮ’ ಸಿನಿಮಾಗಳ ಮಾದರಿಯನ್ನುನಿರ್ದೇಶಕ ವಿಕ್ರಮ್‌ ಯೋಗಾನಂದ ಕನ್ನಡದಲ್ಲಿ ಪ್ರಯೋಗಿಸುತ್ತಿರುವ ‘ಕುಷ್ಕ’ ಚಿತ್ರ ಇದೇ 13ರಂದು ತೆರೆಕಾಣುತ್ತಿದೆ.

ಸಿಂಧೂ ಲೋಕನಾಥ್‌ ನಟನೆಯ ‘ಹೀಗೊಂದು ದಿನ’ಅನ್‌ ಕಟ್‌ ಸಿನಿಮಾ ನಿರ್ದೇಶಿಸಿದ್ದ ವಿಕ್ರಮ್‌,ಕ್ರೇಪರ್‌ ಕ್ರೈಮ್‌ ಕಾಮಿಡಿ ಜಾನರ್‌ನ ಚಿತ್ರವನ್ನು ಕನ್ನಡದ ಪ್ರೇಕ್ಷಕರಿಗೆ ‘ಕುಷ್ಕ’ವಾಗಿ ಉಣಬಡಿಸಲು ಹೊರಟಿದ್ದಾರೆ. ನಿರ್ದೇಶನದ ಜತೆಗೆ ರಚನೆ, ಸಂಕಲನ, ಛಾಯಾಗ್ರಹಣದ ಹೊಣೆಯನ್ನೂ ಅವರು ನಿಭಾಯಿಸಿದ್ದಾರೆ.

ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್‌ ಡಾನ್‌ ಆಗಿ, ಕಾಮಿಡಿ ವಿಲನ್‌ ಪಾತ್ರಕ್ಕೆ ಬಣ್ಣ ಹಚ್ಚಿರುವ ಈ ಚಿತ್ರದ ಟೀಸರ್‌ ಕಚ್ಚಾ ಸಂಭಾಷಣೆಯಿರುವ ಕಾರಣಕ್ಕೆ ಸುದ್ದಿಯಾಗಿತ್ತು. ಸೆನ್ಸಾರ್‌ ವೇಳೆ ಸಿನಿಮಾದೊಳಗಿನ ಹಲವು ಡಬಲ್‌ ಮೀನಿಂಗ್‌ಸಂಭಾಷಣೆಗಳಿಗೆ ಕತ್ತರಿ ಬಿದ್ದ ಪರಿಣಾಮ, ಟ್ರೇಲರ್‌ನಲ್ಲಿ ಸಂಭಾಷಣೆಗಳನ್ನು ಟ್ರಿಮ್‌ ಮಾಡಿರುವುದು ಗೋಚರಿಸುತ್ತದೆ.

ADVERTISEMENT

ಟ್ರೇಲರ್‌ನಲ್ಲಿರುವ‘ನನಗೆ ನನ್ನ13 ವರ್ಷಕ್ಕೆ ಬೆಳೆಯಕೆ ಶುರುವಾಯಿತು.... ಗಡ್ಡ’ ಎನ್ನುವ ಗುರುಪ್ರಸಾದ್‌ ಅವರಡೈಲಾಗ್‌ ಬಗ್ಗೆ ಕೇಳಿದಾಗ ನಿರ್ದೇಶಕ ವಿಕ್ರಮ್‌, ಈ ಜಾನರ್‌ನ ಸಿನಿಮಾಕ್ಕೆ ಇಂತಹ ಡೈಲಾಗ್‌ಗಳ ಅಗತ್ಯವಿತ್ತು. ಕ್ರೈಮ್‌ ಕಥನದಲ್ಲಿ ಡಾರ್ಕ್‌ ಹ್ಯೂಮರಸ್‌ ಇರುವಾಗ ಕಚ್ಚಾ ಸಂಭಾಷಣೆಗಳಿದ್ದರಷ್ಟೇ ಚೆಂದ ಎಂದು ಸಮರ್ಥಿಸಿಕೊಂಡರು.

ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರದ ಸುತ್ತ ಕಥೆ ಹೆಣೆಯಲಾಗಿದೆ. ಈ ವಜ್ರ ಕೈವಶ ಮಾಡಿಕೊಳ್ಳಲು ಅಂತರರಾಷ್ಟ್ರೀಯ ಕುಖ್ಯಾತಿಯ ಸ್ಮಗ್ಲರ್‌ಗಳು, ಭೂಗತಪಾತಕಿಗಳ ಕಣ್ಣು ಬೀಳುತ್ತದೆ. ಆ ವಜ್ರ ನಾಯಕಿ ಬಳಿ ಇದೆ ಎನ್ನುವ ಕಾರಣಕ್ಕೆ ಸ್ಮಗ್ಲರ್‌ಗಳು ಆಕೆಯ ಬೆನ್ನು ಬೀಳುತ್ತಾರೆ. ಇದು ಚಿತ್ರದ ಒಂದು ಸಾಲಿನಕಥೆ. ಸಂಜನಾ ಆನಂದ್‌ ನಾಯಕಿಯಾಗಿ ಮತ್ತು ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಚಂದುಗೌಡ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಶೋಭರಾಜ್‌, ಕೈಲಾಶ್‌ ಪಾಲ್‌, ರಾಕ್‍ಲೈನ್ ಸುಧಾಕರ್‌, ಜೀವನ್‌, ಅರುಣ್‌ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಹದಿಮೂರು ಪಾತ್ರಗಳ ಸುತ್ತ ಕಥೆ ಸುತ್ತುತ್ತದೆ. ಪ್ರೇಕ್ಷಕನಿಗೆ ಈ ಸಿನಿಮಾ ಇಷ್ಟವಾಗುತ್ತದೆ. ಈಗಪೀಸ್‌ಲೆಸ್‌ ಕುಷ್ಕ ನೀಡಿದ್ದೇವೆ, ಮುಂದಿನ ದಿನಗಳಲ್ಲಿ ಬಿರ್ಯಾನಿಯನ್ನೇ ನೀಡುತ್ತೇವೆ ಎಂದರು ವಿಕ್ರಮ್‌.

ಬೆಂಗಳೂರಿನಪ್ರತಾಪ್‍ ರೆಡ್ಡಿ ಮತ್ತು ಚಿಕ್ಕಮಗಳೂರಿನ ಮಧುಗೌಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಚಿತ್ರಕಥೆ ಬಾಲ್‍ ರಾಜ್, ಸಾಹಿತ್ಯ ರಾಮಕೃಷ್ಣ ರಣಗಟಿ, ಸಂಗೀತ ಅಭಿಲಾಷ್‍ಗುಪ್ತ, ಸಾಹಸ ಅಲ್ಟಿಮೇಟ್‍ಶಿವು ಅವರದು. ಸಹ ನಿರ್ಮಾಣದ ಜತೆಗೆಐರಾ ಫಿಲಿಂಸ್ ಸಂಸ್ಥೆ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.