ADVERTISEMENT

‘ಲಂಬೋದರ ವಿವಾಹ’ ಶೀಘ್ರ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 20:08 IST
Last Updated 31 ಜನವರಿ 2023, 20:08 IST
ದಿಶಾ ರಮೇಶ್‌
ದಿಶಾ ರಮೇಶ್‌   

ಸೌರಭ ಕುಲಕರ್ಣಿ ಚೊಚ್ಚಲ ನಿರ್ದೇಶನದ ಸಿನಿಮಾ ‘ಎಸ್.ಎಲ್.ವಿ’ ಬಿಡುಗಡೆಗೆ ಸಜ್ಜಾಗಿದೆ. ರಂಗಭೂಮಿ-ಕಿರುತೆರೆ ನಟ ಅಂಜನ್‌ ಎ. ಭಾರದ್ವಾಜ್‌ ನಾಯಕ ಮತ್ತು ಖ್ಯಾತ ನಟ ಮಂಡ್ಯ ರಮೇಶ್‌ ಪುತ್ರಿ ದಿಶಾ ರಮೇಶ್‌ ಈ ಚಿತ್ರದ ನಾಯಕಿ. ಚಿತ್ರವು ಕಳೆದ ಡಿಸೆಂಬರ್‌ನಲ್ಲಿ ಗಲ್ಫ್‌ ರಾಷ್ಟ್ರಗಳಲ್ಲಿ ವಿಶೇಷ ಪ್ರದರ್ಶನಗಳನ್ನು ಕಂಡಿದೆ.

ಎಸ್.ಎಲ್.ವಿ. ಎಂದರೆ ‘ಸಿರಿ ಲಂಬೋದರ ವಿವಾಹ’. ‘ಸಿರಿ’ ಹಾಗೂ ‘ಲಂಬೋದರ’ ಜೋಡಿಯ ವಿವಾಹ ಮಾಡಿಸಲು ನಾಯಕ-ನಾಯಕಿ ಸಿದ್ಧರಾಗುತ್ತಾರೆ. ಅಲ್ಲಿ ನಡೆಯುವ ಒಂದಷ್ಟು ಹಾಸ್ಯ, ಭಾವನಾತ್ಮಕ ಸನ್ನಿವೇಶಗಳ ಮಿಶ್ರಣವೇ ‘ಎಸ್.ಎಲ್.ವಿ’ ಎನ್ನುತ್ತಾರೆ ನಿರ್ದೇಶಕರು. ತಾರಾಂಗಣದಲ್ಲಿ ರಾಜೇಶ್‌ ನಟರಂಗ, ಸುಂದರ್‌ ವೀಣಾ, ಬಲ ರಾಜವಾಡಿ, ರೋಹಿತ್‌ ನಾಗೇಶ್‌, ಪಿ.ಡಿ. ಸತೀಶ್‌ಚಂದ್ರ, ಸದಾನಂದ ಕಾಳೆ, ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಶಿವು ಇದ್ದಾರೆ. ವರ್ಸ್ಯಾಟೋ ವೆಂಚರ್ಸ್‌, ಪವಮಾನ ಕ್ರಿಯೇಷನ್ಸ್‌, ಫೋರೆಸ್‌ ನೆಟ್‌ವರ್ಕ್‌ ಸಲ್ಯೂಷನ್ಸ್‌ ಹಾಗೂ ಧೂಪದ ದೃಶ್ಯ ಬ್ಯಾನರ್‌ಗಳ ಅಡಿಯಲ್ಲಿ ಚಿತ್ರ ತಯಾರಾಗಿದೆ.

ಕಿಟ್ಟಿ ಕೌಶಿಕ್‌ ಅವರ ಛಾಯಾಗ್ರಹಣ, ಸಂಘರ್ಷ್‌ ಕುಮಾರ್‌ ಅವರ ಸಂಗೀತ ನಿರ್ದೇಶನ, ವಿನೋದ್‌ ಅವರ ಸಾಹಸ ನಿರ್ದೇಶನ, ಗಂಗಮ್ ರಾಜು ಅವರ ನೃತ್ಯ ಸಂಯೋಜನೆ, ನಮ್ಮನೆ ಪ್ರೊಡಕ್ಷನ್ಸ್‌ ತಂಡದ ಕ್ರಿಯಾಶೀಲತೆ ಚಿತ್ರದಲ್ಲಿದೆಯಂತೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.