ರಾಜ್ ಬಿ ಶೆಟ್ಟಿ
ಚಿತ್ರ: ಎಕ್ಸ್ ಖಾತೆ
‘ಕಾಟೇರ’ ಸಿನಿಮಾದ ಕಥೆಗಾರ ಜಡೇಶ ಕೆ. ಹಂಪಿ ನಿರ್ದೇಶನದ, ದುನಿಯಾ ವಿಜಯ್ ನಟನೆಯ ‘ಲ್ಯಾಂಡ್‌ಲಾರ್ಡ್’ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ನಟಿಸುತ್ತಿದ್ದಾರೆ. ಇದೀಗ ರಾಜ್ ಬಿ ಶೆಟ್ಟಿ ಅವರ ಪಾತ್ರದ ಲುಕ್ ಹಾಗೂ ಟೀಸರ್ ಬಿಡುಗಡೆಯಾಗಿದೆ.
ಈ ಕುರಿತು ಸಾರಥಿ ಫಿಲ್ಮ್ಸ್ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದೆ. ಅದರ ಜೊತೆಗೆ ರಾಜ್ ಬಿ ಶೆಟ್ಟಿ ಅವರ ಪಾತ್ರದ ಟೀಸರ್ ಕೂಡ ಆನಂದ್ ಆಡಿಯೊ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದೆ. ಟೀಸರ್‌ನಲ್ಲಿ ರಾಜ್ ಬಿ ಶೆಟ್ಟಿ ಅವರು ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ‘ಗುಡಿಯಾಗಿನ ಪೂಜೆ ಆಚಾರ ವಿಚಾರದ ಪ್ರಕಾರ ನಡೆಯುತ್ತದೆ. ಬೇಸಾಯ ಬೀಳೊ ಮಳೆ, ಬೆಳೆಯೋ ಬೆಳೆ ಪ್ರಕಾರ ನಡೆಯುತ್ತದೆ. ಹಣೆಬರಹ ಗೀಚಿದ ಪಾಪ ಪುಣ್ಯದ ಪ್ರಕಾರ ನಡೆಯುತ್ತದೆ. ಎಲ್ಲಾನೂ ಅದರ ಪಾಡಿಗೆ ನಡೆಯುತ್ತಿದ್ದರೇ ನಿಂದೆನು ಇದು ಕಾನೂನು ಪ್ರಕಾರ’ ಎಂದು ಡೈಲಾಗ್ ಹೊಡೆದಿದ್ದಾರೆ.
ಸಾರಥಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಹೇಮಂತ್ ಗೌಡ ಕೆ.ಎಸ್ ಹಾಗೂ ಕೆ.ವಿ. ಸತ್ಯಪ್ರಕಾಶ್ ನಿರ್ಮಾಣ ಮಾಡಿದ್ದಾರೆ. ಜನವರಿ 20ರಂದು ದುನಿಯಾ ವಿಜಯ್ ಅವರ ಜನ್ಮದಿನ. ಹೀಗಾಗಿ ಜನವರಿ 23ಕ್ಕೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.