ADVERTISEMENT

ಫ್ರಾನ್ಸ್‌ನ ಚಿತ್ರ ನಿರ್ದೇಶಕ ಜೀನ್ ಲುಕ್‌ ಗೊಡಾರ್ಡ್ ನಿಧನ

ರಾಯಿಟರ್ಸ್
Published 13 ಸೆಪ್ಟೆಂಬರ್ 2022, 12:45 IST
Last Updated 13 ಸೆಪ್ಟೆಂಬರ್ 2022, 12:45 IST
ಜೀನ್ ಲುಕ್ ಗೊಡಾರ್ಡ್ 
ಜೀನ್ ಲುಕ್ ಗೊಡಾರ್ಡ್    

ಪ್ಯಾರಿಸ್: ಫ್ರಾನ್ಸ್‌ನ ಹೊಸ ಅಲೆಯ ಸಿನಿಮಾ ಪ್ರರ್ವತಕ, ಖ್ಯಾತ ಚಿತ್ರ ನಿರ್ದೇಶಕ ಜೀನ್ ಲೇಕ್ ಗೊಡಾರ್ಡ್ (91) ಮಂಗಳವಾರ ನಿಧನರಾಗಿದ್ದಾರೆ ಎಂದು ‘ಲಿಬರೇಷನ್’ ಪತ್ರಿಕೆ ಹಾಗೂ ಫ್ರಾನ್ಸ್‌ನ ಇತರ ಮಾಧ್ಯಮಗಳು ವರದಿ ಮಾಡಿವೆ.

ವಿಶ್ವದ ಅತ್ಯುತ್ತಮ ಚಿತ್ರ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಜೀನ್ ಲೇಕ್ ಗೊಡಾರ್ಡ್ ಅವರು ‘ಬ್ರೆಥ್‌ಲೆಸ್’, ‘ಕಂಟೆಪ್ಟ್’ ನಂಥ ಸಿನಿಮಾಗಳಿಂದ ಜನಪ್ರಿಯರಾಗಿದ್ದರು. ಫ್ರಾನ್ಸ್‌ನ ಸಿನಿಮಾ ಲೋಕದಲ್ಲಿ ಸಿದ್ಧಮಾದರಿಗಳನ್ನು ಮುರಿದು ಹೊಸ ಮಾದರಿಯ ಸಿನಿಮಾಗಳನ್ನು ಮಾಡಿದ ಅವರು ಫ್ರಾನ್ಸ್‌ನ ಹೊಸ ಅಲೆಯ ಸಿನಿಮಾ ಪ್ರವರ್ತಕ ಎಂದೇ ಖ್ಯಾತರಾಗಿದ್ದರು.

1930ರ ಡಿ. 3ರಂದು ಪ್ಯಾರಿಸ್‌ನ ಶ್ರೀಮಂತ ಕುಟುಂಬದಲ್ಲಿ ಗೊಡಾರ್ಡ್ ಜನಿಸಿದ್ದರು. ಅವರ ತಂದೆ ವೈದ್ಯರಾಗಿದ್ದರು. ತಾಯಿ ಸ್ವಿಸ್ ಮೂಲದವರಾಗಿದ್ದರು.

ADVERTISEMENT

ಗೊಡಾರ್ಡ್ ಅವರು ಹಿಂಸೆ ಹಾಗೂ ಯುದ್ಧ ವಿರೋಧಿ ಸಿನಿಮಾಗಳ ಜತೆಗೆ ಕಮರ್ಷಿಯಲ್‌ ಸಿನಿಮಾಗಳನ್ನೂ ನಿರ್ದೇಶಿಸಿದ್ದರು. ‘ವೀಕೆಂಡ್’, ‘ಟು ಆರ್ ತ್ರಿ ಥಿಂಗ್ಸ್ ಐ ನೋ ಅಬೌಟ್ ಹರ್’, ‘ದಿ ಇಮೇಜ್ ಬುಕ್’, ‘ಗುಡ್ ಬೈ ಲ್ಯಾಂಗ್ವೇಜ್’ ಇವು ಅವರಿಗೆ ಹೆಸರು ತಂದುಕೊಟ್ಟ ಚಿತ್ರಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.