ಜೋಗಿ ಪ್ರೇಮ್
ಬಹುತೇಕ ಹೊಸಬರಿಂದಲೇ ಕೂಡಿರುವ ‘ಲೈಫ್ ಟು ಡೇ’ ಚಿತ್ರದ ‘ಸಿಕ್ಕರೇ..ಸಿಕ್ಕರೇ..ಒಳ್ಳೆ ಹುಡುಗ್ರು ಸಿಕ್ಕರೇ’ ಹಾಡಿಗೆ ಜನಪ್ರಿಯ ನಿರ್ದೇಶಕ ಜೋಗಿ ಪ್ರೇಮ್ ಧ್ವನಿಯಾಗಿದ್ದಾರೆ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಈ ಚಿತ್ರದ ತಮಿಳು ಅವತರಣಿಕೆಯ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ಜೀವಿ ಪ್ರಕಾಶ್ ಧ್ವನಿಯಾಗಿದ್ದರು.
ಕಾಂತ ಕನ್ನಲ್ಲಿ ನಿರ್ದೇಶನದ ಚಿತ್ರಕ್ಕೆ ಪ್ರದೀಪ್ ಬಂಡವಾಳ ಹೂಡಿದ್ದಾರೆ. ಕಿರಣ್ ಆದಿತ್ಯಗೆ ನಾಯಕಿಯಾಗಿ ಲೇಖಚಂದ್ರ ಕಾಣಿಸಿಕೊಂಡಿದ್ದಾರೆ. ಶ್ರೀಧರ್ ವಿ.ಸಂಭ್ರಮ್ ಸಂಗೀತ ನಿರ್ದೇಶನವಿದೆ.
‘ನಾನು ಪ್ರೇಮ್ ಅವರ ಅಭಿಮಾನಿ. ಅವರ ಧ್ವನಿಯಲ್ಲಿರುವ ಮುಗ್ಧತೆ ಮತ್ತು ನೋವಿನ ಗಾಢತೆ ಈ ಹಾಡಿಗೆ ಬೇಕಿತ್ತು. ಹೀಗಾಗಿ ಅವರ ಬಳಿ ಹಾಡಿಸಿದ್ದೇವೆ. ಚಿತ್ರದ ಹಾಡುಗಳು ಹಿಟ್ ಆಗುತ್ತವೆ ಎಂಬ ಭರವಸೆಯಿದೆ’ ಎಂದರು ಸಂಗೀತ ನಿರ್ದೇಶಕ.
ತಬಲ ನಾಣಿ, ಅಪೂರ್ವ, ಕಾಕ್ರೋಚ್ ಸುಧಿ ಮತ್ತು ಜಗಪ್ಪ ತಾರಾಗಣದಲ್ಲಿದ್ದಾರೆ. ಗುರುಪ್ರಸಾದ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.