ತಿರುವನಂತಪುರ: ಫುಟ್‌ಬಾಲ್ ದಂತಕಥೆ ಲಯೊನೆಲ್ ಮೆಸ್ಸಿ ಅವರ ಹಸ್ತಾಕ್ಷರವಿರುವ ಅರ್ಜೇಂಟೀನಾದ ಜೆರ್ಸಿಯನ್ನು ಮಲಯಾಳಂ ಹಿರಿಯ ನಟ ಮೋಹನ್ ಲಾಲ್ ಅವರು ಪಡೆದಿದ್ದಾರೆ.
ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಮೋಹನ್ ಲಾಲ್, ಜೆರ್ಸಿ ಸಂಖ್ಯೆ 10ರ ಮೇಲೆ ಮೆಸ್ಸಿ ಅವರು ಸಹಿ ಮಾಡುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
‘ಜೀವನದ ಕೆಲವೊಂದು ಕ್ಷಣಗಳನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಇಂದು ಅಂತಹ ಒಂದು ಕ್ಷಣ ನನ್ನ ಜೀವನದಲ್ಲಿ ಅನುಭವಿಸಿದ್ದೇನೆ. ಫುಟ್‌ಬಾಲ್ ದಂತಕತೆ ಲಯೊನೆಲ್ ಮೆಸ್ಸಿ ಹಸ್ತಾಕ್ಷರವಿರುವ ಜೆರ್ಸಿಯನ್ನು ಕಂಡಾಕ್ಷಣ ನಿಜಕ್ಕೂ ದಂಗಾದೆ. ಅವರ ಕೈಯಿಂದ ನನ್ನ ಹೆಸರು ಬರೆಯಲಾಗಿತ್ತು’ ಎಂದು ಅವರು ಬರೆದುಕೊಂಡಿದ್ದಾರೆ.
‘ಮೆಸ್ಸಿ, ಮೈದಾನದಲ್ಲಿ ತಮ್ಮ ಅದ್ಭುತ ಪ್ರತಿಭೆಗೆ ಮಾತ್ರವಲ್ಲದೆ ನಮ್ರತೆ ಮತ್ತು ಮಾನವೀಯ ಗುಣಗಳಿಂದಲೂ ಇಷ್ಟವಾಗುತ್ತಾರೆ. ನಿಜಕ್ಕೂ ಇದು ವಿಶೇಷವಾದ ಉಡುಗೊರೆ. ಇದಕ್ಕಾಗಿ ಸ್ನೇಹಿತರಾದ ಡಾ. ರಾಜೀವ್ ಮಂಗೋಟ್ಟಿಲ್ ಮತ್ತು ರಾಜೇಶ್ ಫಿಲೀಪ್ ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.