ADVERTISEMENT

ಸಾಯಿ ಪಲ್ಲವಿ, ನಾಗ ಚೈತನ್ಯ 'ಲವ್‌ ಸ್ಟೋರಿ': ಏಯ್ ಹುಡುಗಿ... ಓಡೋಡಿ ಹೋಗೋಣವಾ...

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 9:46 IST
Last Updated 12 ಮಾರ್ಚ್ 2020, 9:46 IST
   

ಹೈದರಾಬಾದ್‌: ಯುವ ಸಾಮ್ರಾಟ್‌ ನಾಗಚೈತನ್ಯ, ಟ್ಯಾಲೆಂಟೆಡ್‌ ಬ್ಯೂಟಿ ಸಾಯಿ ಪಲ್ಲವಿ ನಟಿಸಿರುವ ಲವ್‌ ಸ್ಟೋರಿ ಸಿನಿಮಾದ ಲಿರೀಕಲ್‌ ಸಾಂಗ್‌ ಬಿಡುಗಡೆಯಾಗಿದ್ದು ಸಿನಿ ಪ್ರಿಯರು ಈ ಹಾಡಿನ ಸಾಹಿತ್ಯಕ್ಕೆ ಮಾರು ಹೋಗಿದ್ದಾರೆ.

ಚೈತನ್ಯ ಪಿಂಗಲಿ ಸಾಹಿತ್ಯ ಇರುವ ಈ ಹಾಡಿಗೆ ಪವನ್‌ ಸಂಗೀತ್ ಸಂಯೋಜನೆ ಮಾಡಿದ್ದಾರೆ. ಮನಸ್ಸಿಗೆ ಮುದ ನೀಡುವ ಈ ಮೆಲೋಡಿಯಸ್‌ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ 11 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.

ಏಯ್ ಹುಡುಗಿ.. ಓಡೋಡಿ ಹೋಗೋಣವಾ...
ಯಾವ ಕಡೆಗೋ... ಜೊತೆಯಾಗಿಯೇ ಇರೋಣವಾ..ಬಾ ಬಾ.. ಬೇಲಿ ಹಾರಿ ಚಕ ಚಕವೆಂದು ಓಡುತ್ತಾ...
ಕಾಮನಬಿಲ್ಲನ್ನು ಬಿಡಿಸಿ.... ಈ ಬದಿಯಲ್ಲಿ ಸೇತುವೆಯನ್ನು ನಿರ್ಮಿಸಿ.. ಬರುವೆಯಾ...ಎಷ್ಟೋ ಬಾಗಿಲುಗಳು.. ಏನೋ ವಿಸ್ಫೋಟಗಳು ..ಬದುಕಿನ ಬಂಡಿ ಉರುಳುತ್ತಿದ್ದರೂ... ಗಾಳಿಯಲ್ಲಿನ ಚಿಟ್ಟೆಯಂತೆ ಹಾರುವ ಕನಸುಗಳು ನನ್ನವು... ಆಸೆ ನಿರಾಶೆಗಳ ಉಯ್ಯಾಲೆಯಾಟಗಳು...ಬೆಳಗ್ಗೆ ಸಂಜೆಗಳ ನಡುವೆ...
ನಾನಗೇನಾದರೂ ಇದ್ದರೆ... ಇರುವುದೆಲ್ಲಾ ನಿನಗೆ"...ಎಂಬ ಸಾಲುಗಳು ಮನಸ್ಸಿಗೆ ತುಂಬಾ ಆಪ್ತವಾಗುತ್ತವೆ.

ADVERTISEMENT

ಶೇಖರ್‌ ಕಮುಲ್ಲಾ ಆಯಕ್ಷನ್‌ ಕಟ್‌ ಹೇಳಿರುವ ರೊಮ್ಯಾಂಟಿಕ್‌ ಕತೆಯುಳ್ಳ 'ಲವ್‌ ಸ್ಟೋರಿ' ಏಪ್ರಿಲ್‌ 2ರಂದು ಬಿಡುಗಡೆಯಾಗಲಿದೆ. ನಾರಾಯಣ ದಾಸ್‌ ಕೆ.ನಾರಂಗ್‌ ಹಾಗೂ ಕೆ.ಪಿ ರಾಮ್‌ ಮೋಹನ್‌ ನಿರ್ಮಿಸಿರುವ ಈ ಚಿತ್ರದಲ್ಲಿ ತೆಲಂಗಾಣ ಸೊಗಡಿನ ಭಾಷೆ ಪ್ರೇಕ್ಷಕರ ರಂಜಿಸಲಿದೆ.

ಮಲಯಾಳದ 'ಪ್ರೇಮಂ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಾಯಿ ಪಲ್ಲವಿ, ತಮಿಳು, ತೆಲುಗು ಹಾಗೂ ಮಲಯಾಳ ಭಾಷೆಯಲ್ಲಿ ಬಿಗ್‌ ಹಿಟ್‌ಗಳನ್ನ ನೀಡಿದ್ದಾರೆ. ಶೇಖರ್ ಕಮ್ಮುಲಾ ಎರಡನೆ ಬಾರಿಗೆ ಸಾಯಿ ಪಲ್ಲವಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ 'ಫಿದಾ' ಸಿನಿಮಾ ಮಾಡಿದ್ದರು.

'ಲವ್ ಸ್ಟೋರಿ' ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.