ADVERTISEMENT

ಎರಡು ಹೊಸ ಸಿನಿಮಾ ಘೋಷಿಸಿದ ಲೈಕಾ ಪ್ರೊಡಕ್ಷನ್: ಬರುತ್ತಿದೆ ಚಂದ್ರಮುಖಿ 2

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜೂನ್ 2022, 14:06 IST
Last Updated 14 ಜೂನ್ 2022, 14:06 IST
ಚಂದ್ರಮುಖಿ 2 ಚಿತ್ರತಂಡ
ಚಂದ್ರಮುಖಿ 2 ಚಿತ್ರತಂಡ   

ಬೆಂಗಳೂರು: ದಕ್ಷಿಣ ಭಾರತದ ಪ್ರಮುಖಸಿನಿಮಾ ಪ್ರೊಡಕ್ಷನ್ ಹೌಸ್ ಎಂದು ಖ್ಯಾತಿ ಇರುವ ಲೈಕಾ ಪ್ರೊಡಕ್ಸನ್ ಕಂಪನಿ ಇಂದು ಎರಡು ದೊಡ್ಡ ಸಿನಿಮಾಗಳನ್ನು ಘೋಷಣೆ ಮಾಡಿದೆ.

ಹೌದು, ರಜನಿಕಾಂತ್ ಅವರ ಬಿಗ್ ಬಜೆಟ್ ಸಿನಿಮಾ ‘2.0’ ಸೇರಿದಂತೆ ಅನೇಕ ಹಿಟ್ ಚಿತ್ರಗಳನ್ನು ನೀಡಿರುವ ಲೈಕಾ ಇದೀಗ ನಟ ಅಜಿತ್ ಕುಮಾರ್ ಕಾಂಬಿನೇಷನ್‌ನಲ್ಲಿ ಒಂದು ಚಿತ್ರ ಹಾಗೂ ರಾಘವ್ ಲಾರೆನ್ಸ್ ಜೊತೆ ಒಂದು ಚಿತ್ರವನ್ನು ಮಾಡುವುದಾಗಿ ಘೋಷಣೆ ಮಾಡಿದೆ.

ನಯನತಾರಾ ಅವರನ್ನು ಇತ್ತೀಚೆಗಷ್ಟೇ ಮದುವೆಯಾಗಿರುವ ನಿರ್ದೇಶಕ ವಿಘ್ನೇಶ್ ಶಿವನ್ ನಿರ್ದೇಶನದಲ್ಲಿ ಅಜಿತ್ ಕುಮಾರ್ ಅವರ 62 ನೇ ಸಿನಿಮಾ ಪ್ರಾರಂಭವಾಗುತ್ತಿದೆ. ಈ ಸಿನಿಮಾಕ್ಕೆ ಅನಿರುದ್ಧ ಅವರ ಸಂಗೀತವಿದ್ದು ಸುಭಾಸ್ಕರನ್ ಅವರು ನಿರ್ಮಾಣ ಮಾಡುತ್ತಿದ್ದಾರೆ ಎಂದು ಲೈಕಾ ತಿಳಿಸಿದೆ.

ADVERTISEMENT

ಇನ್ನು ನಾಗವಲ್ಲಿ ಖ್ಯಾತಿಯ ಸೂಪರ್ ಹಿಟ್‌ ಚಿತ್ರ ಚಂದ್ರಮುಖಿಯ ಎರಡನೇ ಭಾಗವನ್ನು ಲೈಕಾ ನಿರ್ಮಾಣ ಮಾಡುತ್ತಿದೆ. ರಾಘವ ಲಾರೆನ್ಸ್ ಪ್ರಮುಖ ಪಾತ್ರದಲ್ಲಿರುವ ‘ಚಂದ್ರಮುಖಿ 2’ ಸಿನಿಮಾಕ್ಕೆ ಪಿ.ವಾಸು ಆಕ್ಸನ್ ಕಟ್‌ ಹೇಳುತ್ತಿದ್ದಾರೆ. ಎಂ.ಎಂ ಕೀರವಾಣಿ ಅವರ ಸಂಗೀತವಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.